ಚಿಕ್ಕಮಗಳೂರು : ಸುತ್ತೂರು ಮಠದಲ್ಲಿ ಜನವರಿ 26ರಿಂದ 31ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಚಾರ ರಥವು ಇಂದು ನಗರಕ್ಕೆ ಆಗಮಿಸಿತು. ಈ ವೇಳೆ ಪ್ರಗತಿಪರರು ವಿವಿಧ ಸಮುದಾಯದ ಮುಖಂಡರು ನಗರದ ಕೋರ್ಟ್ ಬಳಿ ರಥಕ್ಕೆ ಪುಷ್ಪನಮನ ಸಲ್ಲಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ನಾಡಿನಲ್ಲೇ ವಿಶೇಷತೆ ಹೊಂದಿರುವ ಸುತ್ತೂರು ಮಠದ ಸಂಚಾರಿ ರಥ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದ ಅವರು ರೈತರ ಬದುಕಿಗೆ ಸುತ್ತೂರು ಶ್ರೀಗಳು ನಿರಂತರವಾಗಿ ಬೆನ್ನೆಲುಬಾಗಿ ನಿಂತಿರುವುದು ಸಂತಸದ ವಿಷಯ ಎಂದರು. ಇದೇ ಜನವರಿ 26 ರಿಂದ 31 ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
Kshetra Samachara
30/12/2024 07:18 pm