ಹುಬ್ಬಳ್ಳಿ: ಎಲ್ಲೆ ನೋಡಿದ್ರು ಕತ್ಲ ಕತ್ಲ ಕತ್ಲ.... ಈ ಮೇನ್ ರೋಡ್‌ದಾಗ ಲೈಟಿನ್ ಕಂಬಾ ಅದಾವ ನಿಜಾ... ಆದ್ರ ಅವು ಲೈಟ್ಸ್ ಹತ್ತಲ್ಲಾ ಇದೆಂತ ದುರ್ದೈವ ನೋಡ್ರಿ ....
ಯತ್ತಾಗ ನೋಡಿದ್ರು ಕತ್ಲ ಕಾಣ್ತತಿ.. ಇದು ಬ್ಯಾರೇ ಎಲ್ಲೂ ಅಲ್ಲಾ ರೀ ನಮ್ ಹುಬ್ಬಳ್ಳಿ ಶಾಂತಿ ನಗರದಿಂದ ಸುಳ್ಳಕ್ಕೆ ಹೋಗೊ ರೋಡ್ ಇದು.... ಇಲ್ಲಿ ಸುಮಾರು ಒಂದು ವರ್ಷ ಆತು ನೋಡ್ರಿ ಬೀದಿ ಲೈಟ್ಸ್ ಹತ್ತಲಾರದ... ಪಾಪ ಇಲ್ಲಿ ಜನಾ ಕತ್ತಲದಾಗ ಓಡಾಡಾಕತ್ತಾರ. ಪಾಲಿಕೆ ಆಫೀಸರ್‌ಗೋಳಿಗೆ ಎಷ್ಟ ಸಾರಿ ಹೇಳಿದದ್ರೂ ಯಾರು ಬಂದು ಬೀದಿ ಲೈಟ್ಸ್ ಹಾಕ್ತಿಲ್ಲಂತ... ಮೊದಲ ದರೋಡೆಕೋರರ ಹಾವಳಿ ಜಾಸ್ತಿ ಆಗೈತಿ.. ಇಲ್ಲಿ ಜನಾ ಕೈಯಾಗ ಜೀವಾ ಹಿಡ್ಕೊಂಡ ಓಡ್ಯಾಡಾಕತ್ತಾರ.... ಕೂಡಲೆ ಹೆಸ್ಕಾಂ ಅಧಿಕಾರಿಗಳೇ, ಪಾಲಿಕೆ ಅಧಿಕಾರಿಗಳೇ ಈ ಸುಳ್ಳ ರೋಡಿನ ಬೀದಿ ಲೈಟ್ಸ್ ಹಾಕಿ ಜನಕ್ ನೆಮ್ಮದಿಯಿಂದ ಇರೋದಕ್ಕ ಅನಕೂಲ ಮಾಡಿ ಕೊಡ್ರಿ..
Kshetra Samachara
29/12/2024 02:12 pm