ನವಲಗುಂದ: ಪಟ್ಟಣದ ಬಸ್ ನಿಲ್ದಾಣದ ಅವಾಂತರ ಹೇಳತೀರದ್ದು, ಈಗಾಗಲೇ ಸಾಕಷ್ಟು ಬಾರಿ ಸಾರ್ವಜನಿಕರು ಅಧಿಕಾರಿಗಳಿಗೆ ಗಮನ ಹರಿಸಲು ಮನವಿ ಮಾಡಿದರೂ ಸಹಿತ ಸಮಸ್ಯೆಗಳು ಹಾಗೆ ಉಳಿದಿವೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಅಂತೂ ಕಣ್ಮರೆಯಾಗಿ ಅನೇಕ ವರ್ಷಗಳೇ ಕಳೆದಿವೆ. ಕುಡಿಯಲು ನೀರಿನ ಸೌಕರ್ಯ ಇಲ್ಲ, ಇದಲ್ಲದೇ ಅನೇಕ ಸಮಸ್ಯೆಗಳ ದೂರಿನನ್ವಯ ವಿಭಾಗೀಯ ನಿಯಂತ್ರಣ ಅಧಿಕಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಾರ್ವಜನಿಕರು ಅಧಿಕಾರಿಯೊಂದಿಗೆ ಸಮಸ್ಯೆಗಳ ಕುರಿತು ವಾಗ್ವಾದ ನಡೆಸಿದರು. ನಂತರ ಕೆಲವು ದಿನಗಳ ಕಾಲಾವಕಾಶ ಕೋರಿದ ಅಧಿಕಾರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಕೇವಲ ಕಾಟಾಚಾರಕ್ಕೆ ಭೇಟಿ ನೀಡಿದರಾ ಅಥವಾ ಸಮಸ್ಯೆ ಬಗೆಹರಿಸುವರಾ ಕಾದು ನೋಡಬೇಕಿದೆ.
- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
31/12/2024 10:37 pm