ಕುಂದಗೋಳ: ಬಡ, ಮಧ್ಯಮ ಕೂಲಿಕಾರರನ್ನು ಗುರುತಿಸಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕರ್ತವ್ಯ ಅನುಷ್ಠಾನ ಮಾಡಬೇಕಾದ ಅಧಿಕಾರಿಗಳೇ ಇಲ್ಲದೆ ಕುಂದಗೋಳ ತಾಲೂಕು ಪಂಚಾಯಿತಿ ಖಾಲಿ ಖಾಲಿ ಕೂತಿದೆ.
ಇದೇನು ವಿಪರ್ಯಾಸವೋ ಅಥವಾ ಅಧಿಕಾರಿಗಳ ವಾಚಾಳಿಯೋ ಗೊತ್ತಿಲ್ಲ ಕುಂದಗೋಳ ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಹುದ್ದೆಗೆ ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿಕೆ ಮೇಡಂ ಅವರು ಆದೇಶ ಕೊಟ್ಟರೂ ಅಧಿಕಾರಿಗಳು ಕುಂದಗೋಳಕ್ಕೆ ಬರೋದೆ ಇಲ್ಲಾ.
ಈ ಹಿಂದೆ ಪ್ರಭಾರಿ ಕರ್ತವ್ಯದಲ್ಲಿದ್ದ ನರೇಗಾ ಸಹಾಯಕ ನಿರ್ದೇಶಕ ಅಜಯ್.ಎನ್ ಅವರು ಪದೋನ್ನತಿ ಹೊಂದಿದ ಬಳಿಕ ಕುಂದಗೋಳ ತಾಲೂಕು ಪಂಚಾಯಿತಿಗೆ ಡಿಸೆಂಬರ್ 6ರಂದು ಸದಾನಂದ ಅಮರಾಪೂರ ಅವರನ್ನು ನೇಮಕ ಮಾಡಲಾಗಿತ್ತು. ಅವರು ಕುಂದಗೋಳಕ್ಕೆ ಬರಲಿಲ್ಲ ಹುದ್ದೆ ವಹಿಸಿಕೊಳ್ಳಲೇ ಇಲ್ಲಾ.
ಆನಂತರ ಡಿಸೆಂಬರ್ 18ರಂದು ಗಿರೀಶ್ ಕೋರಿ ಅವರನ್ನು ಕುಂದಗೋಳ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕರ ಹುದ್ದೆಗೆ ಜಿಲ್ಲಾ ಪಂಚಾಯತ್ ಸಿಇಒ ಮೇಡಂ ಆದೇಶ ಕೊಟ್ಟರೂ ಅವರು ಈ ವರ್ಷ 2024ರಲ್ಲಿ ಬರಲೇ ಇಲ್ಲಾ. ಕಳೆದ ವರ್ಷವೇ ಪ್ರಭಾರಿ ನರೇಗಾ ಸಹಾಯಕ ನಿರ್ದೇಶಕರ ಮೇಲಿದ್ದ ಕುಂದಗೋಳ ತಾಲೂಕು ಪಂಚಾಯಿತಿ ನರೇಗಾ ಸಾಧನೆಯಲ್ಲಿ ಹಿಂದೆ ಬಿದ್ದಿತ್ತು. ಈ ವರ್ಷ ಅಧಿಕಾರಿಗಳೇ ಇಲ್ಲದೆ ಕುಂದಗೋಳ ತಾಲೂಕು ಪಂಚಾಯಿತಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
01/01/2025 09:08 am