ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಿಸಿ ಕಚೇರಿ ಮುಂಭಾಗದ ರಸ್ತೆಯೇ ಹಾಳು

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವೃತ್ತದ ರಸ್ತೆ ಹದಗೆಟ್ಟು ಹೋಗಿದೆ.

ರಸ್ತೆಯ ತುಂಬ ದೊಡ್ಡ ದೊಡ್ಡ ಗುಂಡಿಗಳೇ ಬಿದ್ದಿದ್ದು, ನಿತ್ಯ ವಾಹನ ಸವಾರರು ಈ ಗುಂಡಿಗಳಲ್ಲೇ ಸಾಗಬೇಕಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯ ಸ್ಥಿತಿಯೇ ಹೀಗಿರುವಾಗ ಇನ್ನುಳಿದ ರಸ್ತೆಗಳ ಸ್ಥಿತಿ ಹೇಗಿರಬಾರದು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಈ ರಸ್ತೆಯ ಸ್ಥಿತಿ ಹಾಗೇ ಇದ್ದು, ಆ ಗುಂಡಿಗಳನ್ನು ಮುಚ್ಚುವ ಕೆಲಸ ಮಾತ್ರ ಆಗಿಲ್ಲ. ಧಾರವಾಡ ಹೃದಯ ಭಾಗದಲ್ಲಿರುವ ಈ ರಸ್ತೆಯ ಸ್ಥಿತಿ ಕಂಡು ಇದು ಸ್ಮಾರ್ಟ್ ಸಿಟಿಯೇ ಎಂದು ಜನ ಪ್ರಶ್ನೆ ಮಾಡುವಂತಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/01/2025 03:37 pm

Cinque Terre

78.18 K

Cinque Terre

1

ಸಂಬಂಧಿತ ಸುದ್ದಿ