ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಕುವೆಂಪು ನಾಟಕ.

ಹೊಸದುರ್ಗ : ತಾಲ್ಲೂಕಿನ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕುವೆಂಪು ಅವರಿಗೆ ರಚನಾತ್ಮಕ ಶ್ರದ್ಧಾಂಜಲಿ ಅರ್ಪಿಸಲು ಕುವೆಂಪು ಪ್ರತಿಷ್ಠಾನದ ಪ್ರಶಸ್ತಿ ವಿಜೇತ ಎಸ್ ಪಿ ಚಂದ್ರಶೇಖರ್ ಮತ್ತು ಶಿಕ್ಷಕರ ತಂಡ ಕುವೆಂಪು ವಿರಚಿತ *ಮಹಾರಾತ್ರಿ*ಎಂಬ ನಾಟಕವನ್ನು ಅನಿಕೇತನ ಬಳಗದ ವತಿಯಿಂದ ಪಟ್ಟಣದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪನವರ ರಾಮಕೃಷ್ಣ ಸದನದಲ್ಲಿ ಅಭಿನಯಿಸಲಿದ್ದಾರೆ.

ಅನಿಕೇತನ ಬಳಗದ ಮುಖ್ಯಸ್ಥ ಪಿ.ಎಲ್ .ಲೋಕೇಶ್ವರ್ ತಿಳಿಸಿದ್ದಾರೆ.ನಾಟಕದ ನಂತರ ಬಿ.ಕೆ.ನಾಗರಾಜಪ್ಪನವರ ಮಹಾಕಾವ್ಯದಲ್ಲಿ ಸಮನ್ವಯ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ,ಸಾಹಿತಿ ನಾಗತಿಹಳ್ಳಿ ಮಂಜುನಾಥ್. ನಿವೃತ್ತ ಮುಖ್ಯ ಶಿಕ್ಷಕ ಬಿ.ಪಿ.ಓಂಕಾಪ್ಪ, ನಿವೃತ್ತ ಉಪನ್ಯಾಸಕ ಬಸವರಾಜಪ್ಪ,ಕವಾಯಿತ್ರಿ, ನಳಿನ. ಇತರರು ಭಾಗಿಯಾಗಿದ್ದರು

Edited By : PublicNext Desk
Kshetra Samachara

Kshetra Samachara

29/12/2024 12:55 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ