ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿದ ಪುರಸಭೆ.

ಹೊಸದುರ್ಗ :ಪಟ್ಟಣದಲ್ಲಿ ಮೂಲಭೂತ ಸೌಕರ್ಯದ ಜೊತೆಗೆ ಉದ್ಯಾನವನಗಳ ನಿರ್ಮಾಣ ಹಾಗೂ ಪುರಸಭೆ ವ್ಯಾಪ್ತಿಯ ಕೆರೆ ಕಟ್ಟೆಗಳನ್ನು ಅಭಿವೃದ್ದಿಪಡಿಸಬೇಕು ಎಂದು ಸಾರ್ವಜನಿಕರು ಪುರಸಭೆ ಅಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2025-26ನೇ ಸಾಲಿನ ಆಯವ್ಯಯ ತಯಾರಿಕಾ ಸಂಬಂಧ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರು ಪಟ್ಟಣದ ಅಭಿವೃದ್ದಿ ಕುರಿತು ಸಲಹೆಗಳನ್ನು ನೀಡುವುದರ ಜೊತೆಗೆ ಕುಂದುಕೊರತೆಗಳ ಹೇಳಿ ಗಮನ ಸೆಳೆದರು.

ನಾಗತಿಹಳ್ಳಿ ಮಂಜುನಾಥ್ ಮಾತನಾಡಿ,ಪಟ್ಟಣದಲ್ಲಿ ನಾಯಿ ಕಡಿತ ಪ್ರಕರಣಗಳು ಜಾಸ್ತಿಯಾಗಿದ್ದು, ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಬಸವರಾಜ್ ಮಾತ್ನಡಿ ಪಟ್ಟಣದ 5ನೇ ವಾರ್ಡ್ ಗಾಂಧಿನಗರಸಿ ಸಿ ರಸ್ತೆ, ಮತ್ತು ಚರಂಡಿ ನಿರ್ಮಾಣ ಆಗಬೇಕು ಹಾಗೂ ಶೌಚಾಲಯ, ಬೀದಿ ದೀಪ ದುರಸ್ತಿ ಆಗಬೇಕು,ಶಾಲೆಗಳ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

01/01/2025 03:01 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ