ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷ ಆಚರಣೆ ನಗರದಲ್ಲಿ ಪೊಲೀಸ್ ಬಂದೋಬಸ್ತ್

ಚಿತ್ರದುರ್ಗ: ಹೊಸ ವರ್ಷಾಚರಣೆ ಹಿನ್ನೆಲೆ ಚಿತ್ರದುರ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

2024 ಕಳೆದು 2025 ಕ್ಕೆ ಕ್ಷಣಗಣನೆ ಆರಂಬವಾಗಿದೆ. ಎಲ್ಲೆಡೆ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಸಾರ್ವಜನಿಕರು ಕಾಯುತ್ತಿದ್ದು ಇತ್ತ ಕೋಟೆನಾಡು ಚಿತ್ರದುರ್ಗದಲ್ಲೂ ಕೂಡ ಹೊಸ. ವರ್ಷದ ಸಂಭ್ರಮ ಮನೆ ಮಾಡಿದೆ. ಹೊಸ ವರ್ಷ ಅಂದರೆ ಸಾಕು ಯುವಕನಾಗಿದ್ದಾಗ ಯುವತಿಯರು ಎಂಜಾಯ್ ಮಾಡುವುದು ಪಾರ್ಟಿ ಇತ್ಯಾದಿಗಳು ಸಮಾನ್ಯವಾಗಿರುತ್ತವೆ.

ಈ ಹಿನ್ನೆಲೆ ರಾತ್ರಿ 11 ಗಂಟೆಯಿಂದಲೇ ಚಿತ್ರದುರ್ಗ ನಗರದ ಹಲವಡೆ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನ ಹಾಕಲಾಗಿದ್ದು ಪಾರ್ಟಿ ಮುಗಿಸಿ ಕುಡಿದು ಬರುವವರನ್ನ ಕಡಿವಾಣ ಹಾಕಿ ಅಪಘಾತ ತಪ್ಪಿಸಲು ಪೊಲೀಸ್ ಇಲಾಖೆ ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಿದ್ದು ಪೊಲೀಸ್ ಸಿಬ್ಬಂದಿಗಳು ಬಂದು ಹೋಗುವ ವಾಹನಗಳಪ್ಪ ತಪಾಸಣೆ ಮಾಡುತ್ತಿದ್ದಾರೆ.

ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ನಗರ ಸಂಚಾರ ಮಾಡುತ್ತಿದ್ದು ಇತ್ತ ಹೊಸ ವರ್ಷವನ್ನ ಎಲ್ಲೆಡೆ ಬರಮಾಡಿಕೊಂಡು ಎಂಜಾಯ್ ಮಾಡುತ್ತಿದ್ದು ಆರಕ್ಷಕರು ಮಾತ್ರ ಇದ್ಯಾವುದು ಇಲ್ಲದೆ ಸಾರ್ವಜನಿಕರ ರಕ್ಷಣೆಗಾಗಿ ಕಾಯುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

01/01/2025 12:15 am

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ