ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳು ಪರೀಕ್ಷೆ ಬರೆಯುವಂತ ಆತ್ಮಸ್ಥೈರ್ಯ ತುಂಬಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್

ಚಿತ್ರದುರ್ಗ : ಹತ್ತನೆ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳುವುದರ ಜೊತೆಗೆ ಭಯವಿಲ್ಲದೆ ಮಕ್ಕಳು ಪರೀಕ್ಷೆ ಬರೆಯುವಂತ ಆತ್ಮಸ್ಥೈರ್ಯವನ್ನು ಮೂಡಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್, ಅಂಜುಮನ್-ಎ-ತರಕ್ಕಿ ಉರ್ದು ಹಿಂದ್ ಹಾಗೂ ಕರ್ನಾಟಕ ರಾಜ್ಯ ಉರ್ದು ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಉರ್ದು ಮಾಧ್ಯಮ ಹತ್ತನೆ ತರಗತಿ ಮಕ್ಕಳಿಗೆ ಬಡಮಕಾನ್ ಚಿಸ್ತಿಯಾ ಶಾದಿ ಮಹಲ್‍ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಪೂರ್ವ ಸಿದ್ದತಾ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.

ಆತಂಕದಲ್ಲಿ ಮಕ್ಕಳು ಪರೀಕ್ಷಾ ಕೊಠಡಿ ಪ್ರವೇಶಿಸುವಂತಾಗಬಾರದೆಂದರೆ ಶಾಲೆಯಲ್ಲಿ ಶಿಕ್ಷಕರುಗಳು ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠಗಳನ್ನು ಬೋಧಿಸಬೇಕು. ಪರೀಕ್ಷೆಯನ್ನು ಸಡಗರ ಸಂಭ್ರಮದಿಂದ ಬರೆಯುವಂತ ವಾತಾವರಣ ನಿರ್ಮಾಣವಾದಾಗ ಮಾತ್ರ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಬಹುದು. ಪಾಠಗಳು ಈಗಾಗಲೆ ಮುಗಿದಿದ್ದು, ಪುನರಾವರ್ತನೆಯಾಗುತ್ತಿದೆಯಲ್ಲದೆ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಅಭ್ಯಾಸಿಸಲಾಗುತಿದ್ದು, ಪರೀಕ್ಷಾ ಪೂರ್ವ ಸಿದ್ದತೆಗಳನ್ನು ಕೈಗತ್ತಿಕೊಳ್ಳಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಉಪನ್ಯಾಸಕ ಡಾ.ಶಬ್ಬೀರ್ ಅಹಮದ್, ನಿವೃತ್ತ ಉಪನ್ಯಾಸಕ ಅಂಜುಮನ್ ತರಕ್ಕಿ ಹಿಂದ್ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹಮದ್, ಪ್ರೌಢಶಾಲಾ ಶಿಕ್ಷಕ ಹಿರಿಯೂರಿನ ಎಂ.ರಹಮತ್‍ವುಲ್ಲಾ, ಉರ್ದು ಶಿಕ್ಷಣ ಸಂಯೋಜಕಿ ಸಮೀರಾ, ಕರೂಬಾ ಜಿಲ್ಲಾಧ್ಯಕ್ಷ ಹಾರೂನ್, ರಶೀದ್, ಜಿಲ್ಲಾ ಕಾರ್ಯದರ್ಶಿ ಹಿದಾಯತ್‍ವುಲ್ಲಾ ಷರೀಫ್, ತಾಲ್ಲೂಕು ಆಯಿಬಾ ಅಧ್ಯಕ್ಷ ಜಾಫರ್ ಟಿ. ಶಿಕ್ಷಕ ಫಯಾಜ್ ಅಹಮದ್, ಉರ್ದು ಸಿ.ಆರ್.ಪಿ. ಜಾಫರ್‍ವುಲ್ಲಾ ಶರೀಫ್, ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹಮದ್ ಇದ್ದರು.

Edited By : PublicNext Desk
Kshetra Samachara

Kshetra Samachara

03/01/2025 05:04 pm

Cinque Terre

1.9 K

Cinque Terre

0

ಸಂಬಂಧಿತ ಸುದ್ದಿ