ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಳ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವು ಒಂದೇ ದಾರಿದೀಪ.

ಹೊಸದುರ್ಗ : ತಾಲೂಕಿನ ಮತ್ತೋಡು ಹೋಬಳಿ ಇಂಡೇದೇವರಹಟ್ಟಿ ಗ್ರಾಮದಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಮುಖಂಡ ಬಿ ಜಿ ಅರುಣ್ ಗೋವಿಂದಪ್ಪ ಅವರು ಬೇಡ ಕುಲದ ವಾಲ್ಮೀಕಿಯಿಂದ ಮಾತ್ರ ರಾಮಾಯಣ ರಚಿಸಲು ಸಾಧ್ಯವಾಯಿತು. ಹಿಂದುಳಿದ ವರ್ಗದ ವೇದವ್ಯಾಸರು ಮಹಾಭಾರತವನ್ನು ರಚಿಸಿದರು ಎಲ್ಲಾ ಜ್ಞಾನ ಮತ್ತು ವಿದ್ವತ್ ಹಿಂದುಳಿದ ವರ್ಗಗಳಿಗೆ ಹೆಚ್ಚಾಗಿದ್ದು, ಪೋಷಕರು ತಮ್ಮ ಮಕ್ಕಳನ್ನ ಆಸ್ತಿಯನ್ನಾಗಿ ಮಾಡಿದಾಗ ಮಾತ್ರ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ

ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯ ರಾಜ್ಯಪಾಧ್ಯಕ್ಷ ತುಂಬಿನಕೆರೆ ಬಸವರಾಜ್ ಮಾತನಾಡಿ ಒಂದು ಮನೆಯ ಒಬ್ಬ ವ್ಯಕ್ತಿ ಶಿಕ್ಷಣ ಕಲಿತು ಮುಂದೆ ಬಂದಾಗ ಆ ಕುಟುಂಬದ ಮುಂದಿನ ಮೂರು ತಲೆಮಾರುಗಳು ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದುತ್ತಾರೆ. ಮೀಸಲಾತಿಯಿಂದ ಅಧಿಕಾರವನ್ನು ಪಡೆದುಕೊಂಡವರು ಸಮಾಜದ ಕೆಲಸರದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಸಾಮಾಜಿಕ ಅನ್ಯಾಯವನ್ನು ಕಲ್ಪಿಸಿ ಕೊಡಬೇಕು.

Edited By : PublicNext Desk
Kshetra Samachara

Kshetra Samachara

01/01/2025 03:21 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ