ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿರಾಶ್ರಿತರಿಗೆ ವಾತ್ಸಲ್ಯ ಕಿಟ್ ವಿತರಣೆ.

ಹೊಸದುರ್ಗ : ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಲು ರಾಮೇಶ್ವರ ಹಾಗೂ ಹೊಸದುರ್ಗ ಯೋಜನಾ ಕಚೇರಿಯ ವಿವಿಧ ಹಳ್ಳಿಗಳಲ್ಲಿ ವಾತ್ಸಲ್ಯ ಕಿಟ್ ವಿತರಣೆ ಮಾಡಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ಜೋಡಿತುಂಬಿನಕೆರೆಯಲ್ಲಿ ವೃದ್ಧೆ ಕಮಲಮ್ಮನವರಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಿ ಮಾತನಾಡಿದ ಯೋಜನಾಧಿಕಾರಿಗಳು,ವಾತ್ಸಲ್ಯ ಯೋಜನೆ ಅಡಿ ತಾಲೂಕಿನಲ್ಲಿ ಎಂಟು ಮನೆಗಳನ್ನು ನಿರ್ಮಿಸಿ ಆಸರೆ ರಹಿತ ಕುಟುಂಬಗಳಿಗೆ ಜೀವನ ನಡೆಸಲು ಪೂಜ್ಯ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿಯಮ್ಮನವರು ದಾರಿ ಮಾಡಿಕೊಟ್ಟಿದ್ದಾರೆ. ಪ್ರತಿ ತಿಂಗಳು ಹೊಸದುರ್ಗ ತಾಲೂಕಿನಾದ್ಯಂತ ವೃದ್ಧ, ಆಸರೆ ರಹಿತ ಮಹಿಳೆಯರಿಗೆ ಪೂಜ್ಯ ಹೆಗಡೆಯವರು ರೂ.1000 ಮಾಶಾಸನ ವನ್ನ ಜೀವನದ ನಿರ್ವಹಣೆಗಾಗಿ ನೀಡುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಒಟ್ಟು 195 ಕುಟುಂಬವನ್ನು ಗುರುತಿಸಿದ್ದು ಅದರಲ್ಲಿ ಅಗತ್ಯವಿರುವ 11 ಕುಟುಂಬಗಳಿಗೆ ವಾತ್ಸಲ್ಯ ಕಿಟ್‌ ವಿತರಿಸಿ, 195 ಕುಟುಂಬಗಳಿಗೂ ಪ್ರತಿ ತಿಂಗಳು 1000 ದಂತೆ ಪ್ರತಿ ವರ್ಷ 23,40,000 ಮೊತ್ತವನ್ನು ಅವರ ಮನೆ ಬಾಗಿಲಿಗೆ ಮಶಾಸನ ನೀಡುತ್ತಿದ್ದೇವೆ.

ತಾಲ್ಲೂಕಿನಲ್ಲಿ ಒಟ್ಟು ಅಗತ್ಯವಿರುವ ಕುಟುಂಬಗಳಿಗೆ 6 ಮನೆ ರಚನೆ ,1 ಶೌಚಲಯ,1 ಮನೆ ರಪೇರಿ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು.

Edited By : PublicNext Desk
Kshetra Samachara

Kshetra Samachara

01/01/2025 03:13 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ