ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಶ್ರೀ ಈಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿ ದೇವರುಗಳ ರಥೋತ್ಸವದ ಸಂಭ್ರಮ

ಮೊಳಕಾಲ್ಮುರು: ತಾಲೂಕಿನ ಮೊಗಲಹಳ್ಳಿ ಗ್ರಾಮದಲ್ಲಿ ಶ್ರೀ ಈಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿ ದೇವರುಗಳ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ರಥಕ್ಕೆ ಬಲಿಯನ್ನ ಅರ್ಪಿಸಲಾಯಿತು,ನಂತರ ನಾನಾ ಪುಷ್ಪಗಳ ಬೃಹತ್ ಗಾತ್ರದ ಹಾರಗಳಿಂದ ಹಾಗೂ ದ್ವಜಗಳಿಂದ ಅಲಂಕೃತಗೊಂಡ ರಥವನ್ನು ಗ್ರಾಮದ ಮುಖ್ಯ ಬೀದಿಯಿಂದ ಪಾದಗಟ್ಟೆಯವರೆಗೂ ಕರೆದೊಯ್ದು ವಾಪಾಸು ಎಳೆತರಲಾಯಿತು.

ರಥೋತ್ಸವದಲ್ಲಿ ಕರಡಿ ಮಜಲು, ಗೊಂಬೆಗಳ ಕುಣಿತ. ನಂದಿಧ್ವಜ ಹಾಗೂ ಡೊಳ್ಳು ಕುಣಿತಗಳು ಗಮನ ಸೆಳೆದವು. ರಥೋತ್ಸವದ ಆರಂಭದಲ್ಲಿ ಗೋವಿಗೆ ಸಲ್ಲಿಸಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ಹಾಗೂ ಸೂರುಬೆಲ್ಲ ಎರಚಿ ಭಕ್ತಿ ಸಮರ್ಪಿಸಿದರು.

Edited By : PublicNext Desk
Kshetra Samachara

Kshetra Samachara

27/12/2024 03:54 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ