ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯ ಆವರಣ ಗೋಡೆಗೆ ಸೆಗಣಿ ಸಂಗ್ರಹ - ವಿದ್ಯಾರ್ಥಿಗಳಿಗೆ ತೊಂದರೆ

ಬೈಲಹೊಂಗಲ: ಪಟ್ಟಣದ ಬಿಇಓ ಕಛೇರಿ ಪಕ್ಕದ ಶಾಸಕರ ಮತಕ್ಷೇತ್ರ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 4 ರ ಈ ಶಾಲೆಯು ಪ್ರಸ್ತುತ ಶಿಕ್ಷಣದ ವ್ಯವಸ್ಥೆಯಿಂದ ಮುಂಚೂಣಿಯಲ್ಲಿದ್ದು ನೂತನ ಎಸ್‍ಡಿಎಂಸಿ ಸದಸ್ಯರ ಸಹಕಾರದಿಂದ ಶಾಲೆಯ ವಾತಾವರಣವೇ ಬದಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದೆ.

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಇಲ್ಲಿನ ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸಲು ಶಿಕ್ಷಕರು, ಎಸ್‍ಡಿಎಂಸಿ ನೂತನ ಆಡಳಿತ ಮಂಡಳಿ ಸದಾ ಶ್ರಮಿಸುತಿದೆ. ಶಾಲೆಗೆ ಹೊಸ್ ಲುಕ್ ಕೊಟ್ಟಿದ್ದರೆ ಮತ್ತೊಂದೆಡೆ ಶಾಲೆಯ ಹೊರ ಭಾಗದ ಆವರಣದ ಗೋಡೆಗೆ ಸುತ್ತಲಿನ ನಾಗರಿಕರು ಸೆಗಣಿ, ಕಸ, ಕಡ್ಡಿ, ತಾಜ್ಯ ವಸ್ತುಗಳನ್ನು ಸಂಗ್ರಹಿಸುತ್ತಿರುವದರಿಂದ ವಿದ್ಯಾರ್ಥಿಗಳು ನಿತ್ಯ ವಾಸನೆ ಸೇವಿಸಿ ಅನಾರೋಗ್ಯಕ್ಕೆ ಕಾರಣರಾಗುತ್ತಿದ್ದಾರೆ.

ಸೆಗಣಿ, ತಾಜ್ಯ ವಸ್ತುಗಳು ಸೇರಿದಂತೆ ಶಾಲೆಯ ಪಕ್ಕದಲ್ಲಿ ಯಾವದೇ ರೀತಿ ಗಲೀಜು ಮಾಡಬಾರದೆಂದು ಅಲ್ಲಿನ ನಿವಾಸಿಗಳಿಗೆ ತಿಳುವಳಿಕೆ ನೀಡಿ, ಪುರಸಭೆಯ ಅಧಿಕಾರಿಗಳಿಗೂ ಈ ಕುರಿತು ಮೌಖಿಕವಾಗಿ ತಿಳಿಸಿ ಪರಿಹಾರ ಕಲ್ಪಿಸಲು ಒತ್ತಾಯಿಸಿದರೂ ಅವರು ಸಹ ಯಾವೂದಕ್ಕೂ ಖ್ಯಾರೆ ಎನ್ನುತ್ತಿಲ್ಲ ಎಂದು ಪುರಸಭೆ ಸದಸ್ಯ ಹಾಗೂ ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಮತ್ತು ಮುಖ್ಯೋಪಾಧ್ಯಾಯ ಚಂದ್ರು ಶೀಗಿಹಳ್ಳಿ ಆರೋಪಿಸುತ್ತಿದ್ದಾರೆ.

ಶಾಲೆಯ ವಾತಾವರಣ ಒಂದು ಕಡೆ ಅಂದವಾಗುತ್ತಿದ್ದರೆ ಇನ್ನೊಂದು ಕಡೆ ಜನರ ಕಿರಿ-ಕಿರಿಯಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲೇ ಶಾಸಕರ ಶಾಲೆ ಅಂತಾ ಮಾದರಿಯಾಗಿರುವ ಮತಕ್ಷೇತ್ರದ ಈ ಮಾದರಿ ವಿದ್ಯಾಕೇಂದ್ರದ ಪ್ರಗತಿಗಾಗಿ ಶಿಕ್ಷಕರ, ಎಸ್‍ಡಿಎಂಸಿ ಸದಸ್ಯರ, ಸಾರ್ವಜನಿಕರ, ಪಾಲಕರ, ಅಧಿಕಾರಿಗಳ ಹಿತದೃಷ್ಟಿ ಅಗತ್ಯವಿದ್ದು ಈಗಾಗಿ ಕೂಡಲೇ ಶಾಲೆಯ ಆವರಣ ಗೋಡೆಗೆ ತಾಜ್ಯ ಸಂಗ್ರಹಿಸುತ್ತಿರುವನ್ನು ತೆರವುಗೊಳಿಸಿ ಅನುಕೂಲ ಒದಗಿಸಿಕೊಡಬೇಕೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/12/2024 03:00 pm

Cinque Terre

11.68 K

Cinque Terre

0

ಸಂಬಂಧಿತ ಸುದ್ದಿ