ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಅಟಲ್ ಜೀ ಶತಮಾನ ಕಂಡ ಶ್ರೇಷ್ಠ ನಾಯಕ ನಮಗೆ ಎಂದೆಂದಿಗೂ ದಾರಿದೀಪ - ಜಗದೀಶ ಮೆಟಗುಡ್ಡ

ಬೈಲಹೊಂಗಲ: ಪಟ್ಟಣದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರ ಗೃಹ ಕಛೇರಿಯಲ್ಲಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿ. ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ದೂರದೃಷ್ಟಿ ಆಡಳಿತದ ಮೂಲಕ ಜನಮನ ಗೆದ್ದ ನಾಯಕ ಮಾಜಿ ಪ್ರಧಾನಿ, ಭಾರತ ರತ್ನ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮದಿನದ ಪ್ರಯುಕ್ತ ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ.

ದೇಶ ಕಂಡ ಅತ್ಯುತ್ತಮ ಮಾಜಿ ಪ್ರಧಾನಿ ಅವರ ಜನ್ಮಸ್ಮರಣೆಯ ಸಂದರ್ಭದಲ್ಲಿ ಸದೃಢ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಸ್ಮರಿಸುತ್ತಿದೆ, ಅವರ ಆದರ್ಶಯುತ ಜೀವನ ಮತ್ತು ಸಾಧನೆಗಳು ದೇಶದ ಅಭಿವೃದ್ಧಿಯ ಪಥ ಮುನ್ನಡೆಯಲು ನಿತ್ಯ ನಿರಂತರ ಮಾರ್ಗದರ್ಶಿಯಾಗಿವೆ.

ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೈತರು, ಬಡವರು ಹಾಗೂ ಹಿಂದುಳಿದ ವರ್ಗದವರ ಪರವಾಗಿ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳು ಅಟಲ್ ಜೀ ಅವರ ಕನಸುಗಳು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿರುವುದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗುರು ಮೆಟಗುಡ್ಡ, ಹಿರಿಯ ಮುಖಂಡ ಗುರುಪಾದ ಕಳ್ಳಿ, ಸುನೀಲ ಮೆಟಗುಡ್ಡ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮುಖಂಡರಾದ ಅಜ್ಜಪ್ಪ ಹೊಸೂರ, ರವಿ ಹೊಸೂರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/12/2024 04:34 pm

Cinque Terre

9.4 K

Cinque Terre

0

ಸಂಬಂಧಿತ ಸುದ್ದಿ