ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಹಸ್ರ ಚಂಡಿಕಾ ಪಾರಾಯಣಕ್ಕೆ ಚಾಲನೆ

ಮುಲ್ಕಿ: ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ಧ ಆಚರಣೆ ಪ್ರಯುಕ್ತ ಹರಿದ್ವಾರ ಶ್ರೀ ವ್ಯಾಸ ಮಂದಿರದಲ್ಲಿ 2025ಎಪ್ರಿಲ್ 10ರಿಂದ 12ರ ವರೆಗೆ ನಡೆಯಲಿರುವ ಸಹಸ್ರ ಚಂಡಿಕಾಯಾಗದ ಪೂರ್ವಭಾವಿಯಾಗಿ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಯತಿಯಾಗಿ ಸನ್ಯಾಸತ್ವ ಸ್ವೀಕರಿಸಿದ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ವಿಜಯೀಂದ್ರ ಮಂಟಪದಲ್ಲಿ ಸಹಸ್ರ ಚಂಡಿಕಾ ಪಾರಾಯಣ ಕಾರ್ಯಕ್ರಮಕ್ಕೆ ಚಾಲನೆಯನ್ನು ಶ್ರೀ ಕಾಶೀಮಠಾಧೀಶ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ವಿವಿಧ ಪುಣ್ಯ ಕ್ಷೇತ್ರಗಳಿಂದ ಆಗಮಿಸಿದ 300 ವೈದಿಕರಿಂದ ಗುರುಗಣಪತಿ ಪೂಜೆ ಹಾಗೂ ಸಹಸ್ರ ಚಂಡಿಕಾ ಪಾರಾಯಣವು ವಿದ್ಯುಕ್ತವಾಗಿ ಜರುಗಿತು. ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕವರ್ಗ, ಆಡಳಿತ ಮಂಡಳಿ, ಮೂಲ್ಕಿ ಹತ್ತು ಸಮಸ್ತರು ಹಾಗೂ ಭಜಕವೃಂದ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

26/12/2024 05:59 pm

Cinque Terre

726

Cinque Terre

0

ಸಂಬಂಧಿತ ಸುದ್ದಿ