ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು, ಅವರೇ ಸಮಾಜವನ್ನು ಬದಲಾಯಿಸುವವರು - ನ್ಯಾ.ಸಂತೋಷ್ ಹೆಗ್ಡೆ

ಕಾರ್ಕಳ: ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ಧರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನ್ಯಾ. ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಕಳದ ಎಸ್‌ವಿಟಿ ಕಾಲೇಜು ಸಭಾಂಗಣದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 'ಡಾ.ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಸಾಹಿತಿ, ಹಿರಿಯ ಪತ್ರಕರ್ತ, ಬಿ.ಎಂ.ಬಶೀರ್ ಅವರಿಗೆ 'ಡಾ.ಶೇಖ‌ರ್ ಅಜೆಕಾ‌ರ್ ರಾಜ್ಯ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು. ಅವರೇ ಸಮಾಜವನ್ನು ಬದಲಾಯಿಸುವವರು. ಮಾನವೀಯತೆಯನ್ನು ರೂಢಿಸಿಕೊಂಡು, ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಿ. ಮನುಷ್ಯ ಹುಟ್ಟುವಾಗ ಮಾನವ ಆಗದೆ ಬದುಕಿನಲ್ಲಿ ಮಾನವೀಯತೆ ಮೌಲ್ಯವನ್ನು ಬೆಳೆಸಿಕೊಂಡು ಸಾರ್ಥಕ ಬದುಕನ್ನು ಬದುಕಿ ಮನುಷ್ಯನಾಗಿ ಸಾಯವುದೇ ಮಾನವೀಯತೆಯ ಪ್ರತೀಕ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಎಂ.ಬಶೀರ್, ಶೇಖರ ಅಜೆಕಾರು ಸಾಹಿತ್ಯ ಸಂಘಟಕರಾಗಿದ್ದು ಜನಮೆಚ್ಚುಗೆಗೆ ಪಾತ್ರರಾದವರು. ಊರಿಗೆ ಹಾಗೂ ಮುಂಬೈ ಜನರಿಗೆ ಸ್ನೇಹ ಸೇತುವಾಗಿದ್ದರು. ಅವರು ಸೂಕ್ಷ್ಮ ಸಂವೇದನೆ ಹೊಂದಿದ್ದರು ಎಂದರು.

Edited By : PublicNext Desk
Kshetra Samachara

Kshetra Samachara

26/12/2024 08:35 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ