ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನೇಮದ ನಡೆಯಲ್ಲಿ ತ್ಯಾಜ್ಯ ರಾಶಿ ಕೆಂಡಾಮಂಡಲವಾದ ದೈವ - ಕಕ್ಕಾಬಿಕ್ಕಿಯಾದ ಆಡಳಿತ ಮಂಡಳಿ

ಮಂಗಳೂರು: ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ಕೆಂಡಾಮಂಡಲವಾದ ವೈದ್ಯನಾಥ ದೈವ ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ ಹೊರಡೋಲ್ಲವೆಂದು ಕೆಂಡಾಮಂಡಲವಾದ ಘಟನೆ ಮಂಗಳೂರಿನ ಹೊರವಲಯದ ಕನೀರುತೋಟದಲ್ಲಿ ನಡೆದಿದೆ.

ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆಜಾತ್ರೆ ಬುಧವಾರ ನಡೆದಿತ್ತು. ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. "ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ" ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ.

ಇದರಿಂದ ಕಕ್ಕಾಬಿಕ್ಕಿಯಾದ ಆಡಳಿತ ಮಂಡಳಿ ತಕ್ಷಣ ತ್ಯಾಜ್ಯವನ್ನು ಎತ್ತಿದೆ. ಅಲ್ಲದೆ, ವಲಸರಿ ಹೊರಡುವ ದೀಪದ ದಳಿಯ ಬದಿಯಲ್ಲಿ ಇರುವ ಸಂತೆಗಳನ್ನು ಎತ್ತಲಾಗಿದೆ. ಆ ಬಳಿಕವೇ ದೈವ ವಲಸರಿ ಹೊರಡಿದೆ. ಒಟ್ಟಿನಲ್ಲಿ ದೈವವೂ ಸ್ವಚ್ಛತೆಯ ಪಾಠ ಮಾಡುವಲ್ಲಿವರೆಗೆ ಸಮಾಜ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯೆನಿಸಿದೆ.

Edited By : Suman K
Kshetra Samachara

Kshetra Samachara

27/12/2024 12:21 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ