ಕುಂದಾಪುರ: ಕಾಶ್ಮೀರದಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಸೈನಿಕ ಹವಾಲ್ದಾರ್ ಅನೂಪ್ ಪೂಜಾರಿ ಅಂತಿಮ ಯಾತ್ರೆಗೆ ಭಾರೀ ಜನ ಸೇರಿದ್ದಾರೆ.ಈ ವೇಳೆ ಬೀಜಾಡಿಯ ಜನ ನೋವಿನ ಜೊತೆಯಲ್ಲೇ ರಂಗೋಲಿ ಮೂಲಕ ಅಂತಿಮ ನಮನ ಸಲ್ಲಿಸಿದರು.
ಯೋಧನ ಅಂತಿಮ ಯಾತ್ರೆ ಸಾಗುವ ರಸ್ತೆಯಲ್ಲೆಲ್ಲಾ ರಂಗೋಲಿಗಳನ್ನು ರಚಿಸಿ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದರೆ ,ಇನ್ನೊಂದೆಡೆ ರಸ್ತೆಯುದ್ದಕ್ಕೂ ಕಟೌಟ್ ಗಳು ರಾರಾಜಿಸುತ್ತಿದೆ. ಈ ಮೂಲಕ ಜನರು ಭಾರತಾಂಬೆಯ ಪುತ್ರನಿಗೆ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ. ಇದೇ ವೇಳೆ ಜಿಲ್ಲೆಯ ಸಂಸದರು ,ಶಾಸಕರು ಜನಪ್ರತಿನಿಧಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಅಂತಿಮ ಯಾತ್ರೆ ನಡೆಯಿತು.ಸದ್ಯ ಬೀಜಾಡಿಯ ಮನೆಗೆ ಪಾರ್ಥಿವ ಶರೀರ ತಲುಪಿದ್ದು ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
PublicNext
26/12/2024 08:41 pm