ಬ್ರಹ್ಮಾವರ: ಸರಕಾರಿ ಮಾದರಿ ಹಿರೀಯ ಪ್ರಾಥಮಿಕ ಶಾಲೆ ಬ್ರಹ್ಮಾವರದಲ್ಲಿ ಮುಗ್ದ ಮಕ್ಕಳ ಪ್ರತಿಭೆಗಳ ಭಾವಯಾನ ಕಾರ್ಯಕ್ರಮವನ್ನು ಗುರುವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉದ್ಘಾಟಿಸಿದರು.
ಅತಿಥಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಭನಾ ಅಂಜುಮ್ ಅವರು ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕಾರ ಮುಖ್ಯವಾಗಿರುತ್ತದೆ. ಮಣ್ಣು ಮಡಕೆಯಾಗುತ್ತದೆ, ಶಿಲೆ ಶಿಲ್ಪವಾಗುತ್ತದೆ, ನೀರು ತೀರ್ಥವಾಗುತ್ತದೆ. ಅದೇ ರೀತಿ ಮಾನವರೀಗೆ ಸಂಸ್ಕಾರ ನೀಡಿದರೆ ಮಹದೇವನಾಗುತ್ತಾನೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಗೌರವ, ಸನ್ಮಾನ ಜರುಗಿತು. ಎಸ್.ಡಿ.ಎಂ.ಸಿಯ ಅರುಣ್ ಭಂಡಾರಿ ಬೈಕಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ರವೀಂದ್ರ ಉಪಾಧ್ಯಾಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿತ್ಯಾನಂದ ಬಿ ಆರ್, ಶೊಭಾ ಪೂಜಾರಿ, ಲಯನ್ ಜಯರಾಮ ನಾಯಕ್, ರಾಮಕೃಷ್ಣ ಗಾಣಿಗ,ಪಾಂಡುರಂಗ ಕುಲಾಲ್, ಮಧ್ವರಾಜ್ ಹೆಗ್ಡೆ, ವಿದ್ಯಾರ್ಥಿ ನಾಯಕಿ ನಿಹಾರಿಕಾ ಇನ್ನಿತರು ಉಪಸ್ಥಿತರಿದ್ದರು.
PublicNext
27/12/2024 07:30 am