ಮುಲ್ಕಿ: ಜಗತ್ತಿಗೆ ಶಾಂತಿ ಸಮಾಧಾನದ ಬೆಳಕುಚೆಲ್ಲಲು ದೇವರು ಮಾನವರೂಪದಲ್ಲಿ ಅವತರಿಸಿ ನಮ್ಮೊಡನಿದ್ದು ನಮ್ಮನ್ನು ಸನ್ಮಾರ್ಗದತ್ತ ನಡೆಸಿದ ಏಸುಕ್ರಿಸ್ತರ ಜೀವನ ತತ್ವ ಆದರ್ಶ ನಮ್ಮ ಜೀವನದಲ್ಲಿ ಪ್ರತಿನಿತ್ಯ ಪಾಲಿಸುವಂತಾಗಬೇಕು ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚು ಸಭಾಪಾಲಕರಾದ ರೆ. ಅಮೃತ್ ರಾಜ್ ಖೋಡೆ ಹೇಳಿದರು.
ಮುಲ್ಕಿಕಾರ್ನಾಡು ಅವರ್ ಲೇಡಿ ಆಪ್ ಇಮ್ಯಾಕ್ಯುಲೇಟ್ ಕಂಸೆಪ್ಶನ್ ಚರ್ಚು ಹಾಗೂ ಸೈಂಟ್ ಮದರ್ ಥೆರೇಸಾ ಆಪ್ ಕೊಲಕೊತ್ತಾ ದೇನರಿ ಸುರತ್ಕಲ್ ವತಿಯಿಂದ ಕಾರ್ನಾಡ್ ಸೈಂಟ್ ಜೋಸೆಫ್ ಹಾಲ್ ನಲ್ಲಿ ನಡೆದ ಕ್ರಿಸ್ಮಸ್ ಐಖ್ಯತೆಯ ಬೆಳಕು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸೈಂಟ್ ಮದರ್ ಥೆರೇಸಾ ಆಪ್ ಕೊಲಕೊತ್ತಾ ದೇನರಿಯ ವಿಕಾರ್ ಫೋರೇನ್ ರೆ. ಆಸ್ಟಿನ್ ಫೆರಿಸ್ ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಚರ್ಚಿನ ಧರ್ಮಗುರು ರೆ. ಅಂಟನಿ ಶೇರಾ, ಕಾರ್ನಾಡು ಮಸೀದಿ ಧರ್ಮ ಗುರು ಜನಾಬ್ ಅಬ್ದುಲ್ ರಜಾಕ್ ಮದನಿ, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ,ಕಾರ್ಯದರ್ಶಿ ಎಡ್ವಿನ್ ಡಿಸೋಜ ಮತ್ತು ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು. ಸಿಸ್ಟರ್ ಸೆವೆರಿನ್ ಮಿನೇಜಸ್ ನಿರೂಪಿಸಿದರು.
Kshetra Samachara
26/12/2024 07:42 pm