ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್: ಸಿಲಿಂಡರ್ ಸೋರಿಕೆ‌ ಪ್ರಕರಣ- ಚಿಕಿತ್ಸೆ ಫಲಿಸದೇ ಇಬ್ಬರು ಮಾಲಾಧಾರಿಗಳ ಸಾವು..!

ಹುಬ್ಬಳ್ಳಿ: ಸಿಲಿಂಡರ್ ಸೋರಿಕೆ ಪ್ರಕರಣ, ಚಿಕಿತ್ಸೆ ಫಲಿಸದೆ ಇಬ್ಬರು ಅಯ್ಯಪ್ಪ ಮಾಲಾದಾರಿಗಳು ಸಾವನ್ನಪ್ಪಿದ್ದಾರೆ.‌ ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಒಂಬತ್ತು ಮಾಲಾಧಿಗಾರಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತ ಮಾಲಾದಾರಿಗಳು‌ ಕೊನೆ ಉಸಿರೆಳೆದಿದ್ದಾರೆ.‌ ಇನ್ನುಳಿದ ಏಳು ಅಯ್ಯಪ್ಪ ಮಾಲಾಧಿಗಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಮಾಲಾಧಾರಿಗಳ ಜೀವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡಿದ್ದ ಕಿಮ್ಸ್ ವೈದ್ಯರ ತಂಡ. ಅಲ್ಲದೆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೆಂಗಳೂರಿನಿಂದ ತಜ್ಞ ವೈದ್ಯರನ್ನ ಕರೆಸಿದ್ದ ಸಚಿವ ಸಂತೋಷ ಲಾಡ್ ಮತ್ತು ಸರ್ಕಾರ. ಆದ್ರೆ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ ಇಬ್ಬರು ಅಯ್ಯಪ್ಪ ಮಾಲಾಧಿಗಾರಿಗಳು.

Edited By : Abhishek Kamoji
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 07:22 am

Cinque Terre

73.6 K

Cinque Terre

36

ಸಂಬಂಧಿತ ಸುದ್ದಿ