ಕುಂದಗೋಳ : ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಮಹಾಪೂಜೆ ಕಾರ್ಯಕ್ರಮ ಅನ್ನಸಂತರ್ಪಣೆಯೂ ಭಕ್ತಿ ಭಾವಧಿ ಗುಡೆನಕಟ್ಟಿಯಲ್ಲಿ ನೆರವೇರಿದೆ.
ಸತತ ಒಂದು ಗಂಟೆಗೂ ಅಧಿಕ ಕಾಲ ಮಹಾಪೂಜೆ ಕೈಗೊಂಡು ಅಯ್ಯಪ್ಪಸ್ವಾಮಿ ವ್ರತ ಆಚರಣೆ ಮಾಡಿದ ಮಾಲಾಧಾರಿಗಳು ಭಕ್ತಿ ಮೆರೆದರು. ಈ ಪೂಜೆ ಕಾರ್ಯಕ್ರಮದಲ್ಲೇ ಗುರುಸ್ವಾಮಿಯಾದ ಮಾರುದ್ರಪ್ಪ ಮೂಲಿಮನಿ ಇವರು ಕೃಷಿಕ ಸಮಾಜದ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು, ಭಕ್ತರು ಉಪಸ್ಥಿತರಿದ್ದರು.
Kshetra Samachara
25/12/2024 01:56 pm