ಕುಂದಗೋಳ: ರೈತರು ಪುರಾತನ ಕೃಷಿ ಜೊತೆಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಸಬಲರಾಗಬೇಕು ಎಂದು ತಹಶೀಲ್ದಾರ್ ರಾಜು ಮಾವರಕರ್ ಹೇಳಿದರು.
ಅವರು ಕುಂದಗೋಳ ಪಟ್ಟಣದ ಕೆ.ಸಿ.ಸಿ ಬ್ಯಾಂಕ್ ಸಭಾ ಭವನದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಿಂದ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 'ಈ ವಾರದಲ್ಲಿ ಬೆಳೆ ಪರಿಹಾರ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಬಸವರಾಜ ಏಣಗಿ ಉಪನ್ಯಾಸ ನೀಡುತ್ತಾ ವ್ಯವಸಾಯವನ್ನು ಕಲೆ, ವಿಜ್ಞಾನ, ವ್ಯಾಪಾರ, ವಾತಾವರಣ ದೃಷ್ಟಿಕೋನದಿಂದ ಮಾಡಬೇಕು. ಅಂದಾಗ ಕೃಷಿಯಲ್ಲಿ ಏಳ್ಗೆ ಸಾಧ್ಯ' ಎಂದರು.
'ಈಗ ಮೇಟಿ ಹಾಗೂ ದನಗಳ ಸಗಣಿ ಮಾಯವಾಗಿದೆ. ಅದು ನಮ್ಮ ಹೊಲಗಳಿಗೆ ಬೇಕು. ರೈತರು ವಿಜ್ಞಾನಿಯಂತೆ ವಿಚಾರ ಮಾಡಬೇಕು. ವ್ಯಾಪಾರಿಯಂತೆ ವ್ಯಾಪಾರ ಮಾಡಬೇಕು' ಎಂದು ಹೇಳಿದರು.
ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅರವಿಂದ ಕಟಗಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ಶಿದ್ದಲಿಂಗಪ್ಪ ಬಾಳಿಕಾಯಿ, ನಾಗರಾಜ ದೇಶಪಾಂಡೆ, ಸಿದ್ದಪ್ಪ ಇಂಗಳಳ್ಳಿ, ದೇವಪ್ಪ ಇಚ್ಚಂಗಿ, ಭರಮಪ್ಪ ಸೊರಟೂರ, ಬಸವರಾಜ ಹರವಿ ಮಾಣಿಕ್ಯ ಚಿಲ್ಲೂರ ಉಪಸ್ಥಿತರಿದ್ದರು.
Kshetra Samachara
24/12/2024 02:50 pm