ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ ಶ್ರೀ ಮಕರ ಜ್ಯೋತಿ ಅಯ್ಯಪ್ಪಸ್ವಾಮಿ ಭಕ್ತ ವೃಂದ ಸೇವಾ ಸಮಿತಿ ವತಿಯಿಂದ ಕುದಿಯುವ ಎಣ್ಣೆಯಲ್ಲಿ ಬಜಿ ತೆಗೆದು ಅಯ್ಯಪ್ಪ ಮಾಲಾಧಾರಿಗಳು ತಮ್ಮ ಭಕ್ತಿಯನ್ನು ಮೆರೆದರು.
ಅಯ್ಯಪ್ಪ ಸ್ವಾಮಿ ಮಹಾಪೂಜೆ ಅಂಗವಾಗಿ, ಗ್ರಾಮದ ಮಹಿಳೆಯರಿಂದ ಕುಂಭ ಮೇಳ, ಎಲ್ಲಾ ಭಜನಾ ಸಂಘ, ಡೋಳ್ಳು ಕುಣಿತ ಹೀಗೆ ಸಕಲ ವಾದ್ಯದೊಂದಿಗೆ ಗ್ರಾಮದಲ್ಲಿ ಅಯ್ತಪ್ಪಸ್ವಾಮಿ ಮೂರ್ತಿಯನ್ನು ಮೆರವಣಿಗೆ ಮಾಡಿದರು. ಇದರ ಜೊತೆಗೆ 18 ವರ್ಷದ ಮಾಲಾದಾರ ಸ್ವಾಮಿಗಳಿಗೆ ತುಲಾಭಾರ ಮತ್ತು 25 ವರ್ಷದ ಮಾಲಾಧಾರ ಸ್ವಾಮಿಗಳಿಗೆ ಕ್ಷೀರಾಭಿಷೇಕ ಮಾಡಿದರು. ಸುತ್ತಮುತ್ತಲಿನ ಗ್ರಾಮದವರು ಈ ಮಹಾಪೂಜೆಯಲ್ಲಿ ಭಾಗವಹಿಸಿದ್ದರು.
Kshetra Samachara
25/12/2024 12:25 pm