ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಿದ್ದಾರೂಢರ ಆಶೀರ್ವಾದದಿಂದ ಶಿವಣ್ಣ ಗುಣಮುಖರಾಗಿ ಬರಲಿ ಎಂದು ಹಾರೈಸಿದ ರಾಜು ತಾಳಿಕೋಟಿ

ಧಾರವಾಡ: ಸರ್ಜರಿಗೆಂದು ಅಮೇರಿಕಾಕ್ಕೆ ತೆರಳಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಶೀಘ್ರ ಗುಣಮುಖರಾಗಿ ಬರಲಿ. ಅವರ ಮೇಲೆ ಸಿದ್ದಾರೂಢರ ಆಶೀರ್ವಾದ ಇರಲಿ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಹಾಗೂ ಹಾಸ್ಯ ನಟ ರಾಜು ತಾಳಿಕೋಟಿ ಹಾರೈಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಶಿವಣ್ಣ ಅವರಿಗೆ ಸರ್ಜರಿ ಆಗುತ್ತಿರುವುದು ನಿಜಕ್ಕೂ ಮನಸ್ಸಿಗೆ ನೋವಾಗಿದೆ. ಆ ಮನೆತನದಲ್ಲಿ ಈಗ ಚಿತ್ರರಂಗಕ್ಕೆ ಮೂರನೇ ತಲೆಮಾರು ಪಾದಾರ್ಪಣೆ ಮಾಡಿದೆ. ಪುನೀತ್ ರಾಜಕುಮಾರ ಅವರ ಅಗಲಿಕೆ ಆ ಕುಟುಂಬಕ್ಕೆ ದೊಡ್ಡ ಪೆಟ್ಟು. ಈಗ ಶಿವಣ್ಣ ಅವರಿಗೆ ಸರ್ಜರಿ ಆಗುವಂತಾಗಿದೆ. ಇದು ಅಗ್ನಿ ಪರೀಕ್ಷೆ ಕಾಲ ಎಂದರು.

ಶಿವಣ್ಣ ಅವರ ಜೊತೆ ನಾನು ನಟಿದ್ದೇನೆ. ಅವರು ಮಾನವೀಯ ಗುಣದ ವ್ಯಕ್ತಿ. ಈಗ ಸರ್ಜರಿಗೆ ಹೋಗಿದ್ದಾರೆ. ಖಾಸ್ಗತೇಶ್ವರ ಹಾಗೂ ಸಿದ್ದಾರೂಢರ ಆಶೀರ್ವಾದ ಅವರಿಗೆ ಇರಲಿ. ಪ್ರತಿಬಾರಿ ಅವರು ಈ ಭಾಗಕ್ಕೆ ಬಂದಾಗ ಸಿದ್ದಾರೂಢ ಮಠಕ್ಕೆ ಭೇಟಿ ಕೊಟ್ಟೇ ಹೋಗುತ್ತಿದ್ದರು. ಹೀಗಾಗಿ ಅವರ ಮೇಲೆ ಸಿದ್ದಾರೂಢರ ಆಶೀರ್ವಾದ ಇದೆ. ಅವರ ಆಶೀರ್ವಾದದಿಂದ ಶಿವಣ್ಣ ಗುಣಮುಖರಾಗಿ ಬರುತ್ತಾರೆ ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/12/2024 04:35 pm

Cinque Terre

37.26 K

Cinque Terre

2

ಸಂಬಂಧಿತ ಸುದ್ದಿ