ಮಲ್ಪೆ: ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅನುಮತಿಯಿಲ್ಲದೆ ತಡರಾತ್ರಿವರೆಗೆ ಡಿಜೆ ಧ್ವನಿವರ್ಧಕ ಬಳಸಿದ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಎಎಸ್‌ಐ ವಿಜಯ್ ಕೆ. ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 11 ಗಂಟೆ ವೇಳೆಗೆ ಉಡುಪಿ ಕಂಟ್ರೋಲ್ ರೂಂನಿಂದ ಮಾಹಿತಿ ಬಂದಂತೆ ಕೊಡವೂರಿನಲ್ಲಿ ಮೆಹಂದಿ ಕಾರ್ಯಕ್ರಮ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿತ್ತು.ಅಲ್ಲಿ ಡಿಜೆಗಳನ್ನು ಬಳಸಿ ರಾತ್ರಿ 11.30ರ ಸಮಯದಲ್ಲಿ ಕರ್ಕಶವಾದ ಸೌಂಡ್ ಹಾಕಲಾಗಿದ್ದು, ಇದಕ್ಕೆ ಯಾವುದೇ ಪೂರ್ವಾನುಮತಿ ಮತ್ತು ಪರವಾನಿಗೆಯನ್ನು ಪಡೆದಿರಲಿಲ್ಲ. ಹಾಗೂ ತಡರಾತ್ರಿವರೆಗೆ ಧ್ವನಿವರ್ಧಕವನ್ನು ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಬಳಸಿದ್ದರಿಂದ ಧ್ವನಿವರ್ಧಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸೌಂಡ್ ಸಿಸ್ಟಂ ಮಾಲಕ ಮತ್ತು ಖಾಸಗಿ ರೆಸಾರ್ಟ್‌ನ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
Kshetra Samachara
20/12/2024 11:00 am