ಮಂಗಳೂರು : ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ ವಂಚಕನೋರ್ವನು ವ್ಯಕ್ತಿಯೊಬ್ಬರಿಗೆ 3.7 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.13ರಂದು ಅಪರಿಚಿತನೋರ್ವನು ಸಂತ್ರಸ್ತ ವ್ಯಕ್ತಿಯ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ GLOBAL INVESTMENTನಲ್ಲಿ 5000ರೂ. ಹಣ ಹೂಡಿಕೆ ಮಾಡಿದರೆ 10,000ರೂ. ವಾಪಾಸು ಕೊಡುವುದಾಗಿ ನಂಬಿಸಿದ್ದಾರೆ. ಆರೋಪಿಯ ಮಾತನ್ನು ನಂಬಿದ ವ್ಯಕ್ತಿ UPI ಮೂಲಕ 5,000ರೂ. ವರ್ಗಾವಣೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಅದೇ ದಿನ 10,000ರೂ. ವರ್ಗಾವಣೆ ಮಾಡಿರುತ್ತಾರೆ.
ಡಿ.14ರಂದು ಅಪರಿಚಿತ ವ್ಯಕ್ತಿ 19,000ರೂ. ಹಣ INVESTMENT ಮಾಡುವಂತೆ ತಿಳಿಸಿದ್ದಾರೆ. ಅದರಂತೆ 19,000ರೂ. ಹಣ ಹೂಡಿಕೆ ಮಾಡಿದ್ದಾರೆ. ಆದರೆ ಅಪರಿಚಿತ ತಾವು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದೀರಿ ಎಂದು ಡಿ.13ರಿಂದ ಡಿ.15ರವರೆಗೆ ಒಟ್ಟು 3,70,000ರೂ. ಹಣರ್ಗಾವಣೆ ಮಾಡಿಸಿದ್ದಾನೆ. ಆದರೆ ಆರೋಪಿಯು ಮೊದಲೇ ನಂಬಿಸಿದಂತೆ ಹೂಡಿಕೆ ಮಾಡಿದ ಹಣವನ್ನು ದುಪ್ಪಟ್ಟು ಮಾಡಿಕೊಡದೇ, ಹೂಡಿಕೆ ಮಾಡಿರುವ ಹಣವನ್ನು ವಾಪಾಸು ಕೊಡದೇ ವಂಚನೆ ಮಾಡಿದ್ದಾನೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
19/12/2024 09:05 pm