ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ 11 ಮೂಟೆ ಗೋಮಾಂಸ ತ್ಯಾಜ್ಯ - ಹಿಂದೂ ಸಂಘಟನೆಗಳಿಂದ ಆಕ್ರೋಶ

ಬೆಳ್ತಂಗಡಿ: ದ.ಕ.ಜಿಲ್ಲೆಯ ಜೀವನದಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು ಗೋಮಾಂಸದ ತ್ಯಾಜ. ಅದೂ ಬರೋಬ್ಬರಿ ಹನ್ನೊಂದು ಮೂಟೆಯಷ್ಟು‌. ಈ ಮೂಲಕ ಪರಮಪಾವನೆ ನೇತ್ರಾವತಿಯ ಒಡಲನ್ನು ಅಪವಿತ್ರಗೊಳಿಸಿ ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕೆಲವೇ ಕೆಲವು ಕಿ.ಮೀ. ದೂರದಲ್ಲಿ ಅಪವಿತ್ರಗೊಳಿಸುವ ಕಾರ್ಯ ನಡೆದಿದೆ. ಚಾರ್ಮಾಡಿಯ ಅನಾರು ಎಂಬಲ್ಲಿ ಮೃತ್ಯುಂಜಯ ನದಿಗೆ ಬರೋಬ್ಬರಿ 11 ಮೂಟೆಯಷ್ಟು ಗೋಮಾಂಸ ತ್ಯಾಜ್ಯವನ್ನು ಎಸೆಯಲಾಗಿದೆ‌‌.

ಕಡಿದ ದನದ ತಲೆ, ಚರ್ಮ, ಕಾಲುಗಳನ್ನು ನದಿಗೆ ಎಸೆಯಲಾಗಿದೆ. ಮೃತ್ಯುಂಜಯ ನದಿಯು ಹರಿದು ಪಜಿರಡ್ಕ ಎಂಬಲ್ಲಿ ನೇತ್ರಾವತಿ ನದಿಯನ್ನು ಸೇರಲಿದೆ. ಅಲ್ಲದೆ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಅಯ್ಯಪ್ಪ ಮಾಲಾಧಾರಿಗಳು ಬಿಡಾರಗಳನ್ನು ಹೂಡಿದ್ದಾರೆ‌. ಅವರು ತಮ್ಮ ದೈನಂದಿನ ಕಾರ್ಯಕ್ಕೆ ಈ ನದಿಯ ನೀರನ್ನೇ ಬಳಸುತ್ತಾರೆ.

ಬೈಟ್: ಪುನೀತ್ ಅತ್ತಾವರ- ಬಜರಂಗದಳ ಮುಖಂಡ

ಜೊತೆಗೆ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೇತ್ರಾವತಿ ನದಿಯಲ್ಲಿ ಲಕ್ಷಾಂತರ ಮಂದಿ ಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಆದ್ದರಿಂದ ಗೋಮಾಂಸ ತ್ಯಾಜ್ಯ ಎಸೆದು ವ್ಯವಸ್ಥಿತವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ನದಿಯನ್ನು ಅಪವಿತ್ರಗೊಳಿಸುವುದೇ ದುಷ್ಕರ್ಮಿಗಳ ಗುರಿಯಾಗಿದೆ ಎಂದು ಹಿಂದೂ ಸಂಘಟನೆಗೆ ಆಕ್ರೋಶ ವ್ಯಕ್ತಪಡಿಸಿದೆ‌‌.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ಬಗ್ಗೆ ದೊಡ್ಡಮಟ್ಟಿನ ಹೋರಾಟವನ್ನೇ ನಡೆಸುತ್ತೇವೆ. ಪೊಲೀಸರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಘಟನೆಗಳಿಗೆ ಪೊಲೀಸರೇ ನೇರ ಹೊಣೆಯಾಗಲಿದ್ದಾರೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.

ಸದ್ಯ ಶಾಂತವಾಗಿರುವ ದ.ಕ.ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರವೇ ಇದು ಎಂಬ ಆತಂಕವಿದ್ದು, ಪೊಲೀಸರು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.

Edited By : Shivu K
Kshetra Samachara

Kshetra Samachara

19/12/2024 08:15 pm

Cinque Terre

3.16 K

Cinque Terre

1

ಸಂಬಂಧಿತ ಸುದ್ದಿ