ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್ : ಫೋಟೋ ಹಂಚಿಕೊಂಡ ನಟಿ

ದಳಪತಿ ವಿಜಯ್ ಹಾಗೂ ಕೀರ್ತಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಕೀರ್ತಿ ಸುರೇಶ್ ಹಾಗೂ ಆ್ಯಂಟೋನಿ ವಿವಾಹಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದರು. ವಿವಾಹಕ್ಕೆ ಬಂದ ಅವರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಡಿ.12ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದೆ.

‘ನನ್ನ ಕನಸಿನ ಮದುವೆಯಲ್ಲಿ ನಮ್ಮ ಡ್ರೀಮ್ ಐಕಾನ್ ನಮ್ಮನ್ನು ಆಶೀರ್ವದಿಸಿದಾಗ’ ಎಂದು ನಟಿ ಅಡಿಬರಹ ನೀಡಿ, ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅವರ ಉಪಸ್ಥಿತಿಯನ್ನು ನಟಿ ಸಂಭ್ರಮಿಸಿದ್ದಾರೆ. ಇನ್ನೂ ವಿಜಯ್ ಮತ್ತು ಕೀರ್ತಿ ಸುರೇಶ್ ನಡುವೆ ಉತ್ತಮ ಒಡನಾಟವಿದೆ. ‘ಭೈರವ’ ಮತ್ತು ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್‌ಗೆ ಕೀರ್ತಿ ನಾಯಕಿಯಾಗಿ ನಟಿಸಿದರು.

ಅಂದಹಾಗೆ, ಆ್ಯಂಟೋನಿ ತಟ್ಟಿಲ್ ಮತ್ತು ಕೀರ್ತಿ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆಯಾದರು. ಕುಟುಂಬಸ್ಥರು ಮತ್ತು ನಟಿಯ ಆಪ್ತ ಕಲಾವಿದರು ಈ ಮದುವೆಯಲ್ಲಿ ಭಾಗಿಯಾದರು.

Edited By : Nirmala Aralikatti
PublicNext

PublicNext

19/12/2024 05:56 pm

Cinque Terre

62.56 K

Cinque Terre

0