ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ಕಾಲಾವಕಾಶ ಕೋರಿದ ನಟ ದರ್ಶನ್

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆರೋಪಿ ದರ್ಶನ್ ಅವರಿಗೆ ಆರು ತಿಂಗಳ ಬಳಿಕ ಕೋರ್ಟ್​​ನಿಂದ ಪೂರ್ಣಪ್ರಮಾಣದ ಜಾಮೀನು ಸಿಕ್ಕಿದೆ. ಆಸ್ಪತ್ರೆಯಲ್ಲಿ ಕಾಲ ಕಳೆದು ಸುಸ್ತಾಗಿದ್ದ ದರ್ಶನ್ ಈಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಸದ್ಯ 4 ವಾರಗಳ ಕಾಲ ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ನಟ ದರ್ಶನ್ ಕಾಲಾವಕಾಶ ಕೋರಿದ್ದಾರೆ. ದರ್ಶನ್ ಪರ ವಕೀಲರಿಂದ ಸೆಷನ್ಸ್ ಕೋರ್ಟ್‌ಗೆ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ಜಾಮೀನು ನೀಡುವಾಗ ಷರತ್ತು ವಿಧಿಸಿತ್ತು. ಕೋರ್ಟ್ ಅನುಮತಿಯಿಲ್ಲದೇ ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ತಿಳಿಸಲಾಗಿತ್ತು. ಇನ್ನು ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಎಸ್‌ಪಿಪಿ ಗೆ 57ನೇ ಸಿಸಿಹೆಚ್ ಕೋರ್ಟ್ ಸೂಚನೆ ಕೊಡಲಾಗುತ್ತು.

ಈ ಹಿನ್ನೆಲೆಯಲ್ಲಿ ಸದ್ಯ 4 ವಾರಗಳ ಕಾಲ ಮೈಸೂರಿಗೆ ತೆರಳಲು ಆರೋಪಿ ದರ್ಶನ್ ಕೋರ್ಟ್‌ಗೆ ಅನುಮತಿ ಕೋರಿದ್ದಾರೆ.

Edited By : Abhishek Kamoji
PublicNext

PublicNext

19/12/2024 02:48 pm

Cinque Terre

32.62 K

Cinque Terre

0