ಸೆಲ್ಪಿ, ರೀಲ್ಸ್ ಹುಚ್ಚಿಗೆ ಬಿದ್ದ ಅನೇಕ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಳೆದುಕೊಳ್ಳುತ್ತಿದ್ದಾರೆ. ಸದ್ಯ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಇದೇ ಸೆಲ್ಪಿ ಗೀಳಿಗೆ ಬಿದ್ದು ಹೋಗಬೇಕಾದ ಪ್ರಾಣ ಉಳಿದ್ದಿದೆ.
ಹೌದು ಚಲಿಸುವ ರೈಲಿನ ಮುಂದೆ ನಿಂತು ಮಹಿಳೆಯೊಬ್ಬಳು ಸೆಲ್ಪಿ ತೆಗೆಯಲು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಬಾರೀ ಅಪಘಾತದಿಂದ ಪಾರಾಗಿದ್ದಾಳೆ. ಸದ್ಯ ಘಟನೆಗೆ ವಿಡಿಯೋ ವೈರಲ್ ಆಗಿದ್ದು ನೋಡುಗರ ಎದೆ ಝಲ್ ಎನ್ನುವಂತಿದೆ.
ಈ ಘಟನೆ ತೈವಾನ್‌ನ ಚಿಯಾಯ್‌ನಲ್ಲಿರುವ ಅಲಿಜಾನ್ ಫಾರೆನ್ಸ್ ರೈಲ್ವೆ ಬಳಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಿಂದಾಗಿ ರೈಲು ಸಂಚಾರದಲ್ಲಿ ವಿಳಂಬವಾಗಿದೆ.
PublicNext
18/12/2024 06:06 pm