ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ವ್ಯಕ್ತಿಗೆ ಅಗೌರವ..ನೌಕರರಿಗೆ ನಿಂತುಕೊಂಡು ಕೆಲಸ ಮಾಡುವ ಶಿಕ್ಷೆ ಕೊಟ್ಟ ಸಿಇಒ : ವಿಡಿಯೋ ವೈರಲ್‌

ಕೆಲವೊಮ್ಮೆ ಕೆಲ ಸರ್ಕಾರಿ ನೌಕರರು ತಮ್ಮ ಕಚೇರಿಗೆ ಬರುವವರಿಗೆ ಗೌರವವನ್ನೇ ಕೊಡುವುದಿಲ್ಲ. ಜನ ತಮ್ಮ ಕೆಲಸಕ್ಕಾಗಿ ಅಲೆದಾಡಿಸುವುದು, ಕಾಯುವುದು ಸಾಮಾನ್ಯ ಎನ್ನುವಂತಾಗಿದೆ. ಸದಗ್ಯ ವೈರಲ್‌ ಆದ ವಿಡಿಯೋವೊಂದರಲ್ಲಿ ಸರ್ಕಾರಿ ಕಚೇರಿ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆಯನ್ನು ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ.

ನೌಕರರ ಈ ವರ್ತನೆಯಿಂದ ಗರಂ ಆದ ಸಿಇಒ ನೀವು ಕೂಡಾ ಹೀಗೆಯೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಅವರಿಗೆ ಶಿಕ್ಷೆ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಸಚಿನ್‌ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಸದ್ಯ 16 ನೌಕರರಿಗೆ ಸ್ಟ್ಯಾಂಡ್‌ ಅಪ್‌ ಶಿಕ್ಷೆ ನೀಡಿರುವ ಸಿಸಿಟಿವಿ ವಿಡಿಯೋ ನೋಡಿದ ನೆಟ್ಟಿಗರು ಸಿಇಒ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

18/12/2024 06:52 pm

Cinque Terre

22.51 K

Cinque Terre

1

ಸಂಬಂಧಿತ ಸುದ್ದಿ