ಆನೆ ಕಂಡ್ರೆ ಎಷ್ಟು ಪ್ರೀತಿಯೋ ಅಷ್ಟೇ ಭಯ ಕೂಡಾ ಹೌದು...ಅದು ಎದುರಿಗೆ ಬಂದರೆ ಸಾಕು ಒಂದು ಕ್ಷಣ ಭಯ ಬೀಳುತ್ತೇವೆ. ಇನ್ನು ಆನೆ ತನ್ನ ಹಾದಿಯಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತವೆ. ತನ್ನ ದಾರಿಯಲ್ಲಿ ಅಡ್ಡಲಾಗಿ ಸಿಗುವ ವಸ್ತುವಾಗಿರಲಿ ಅಥವಾ ಮನಷ್ಯನಾಗಿರಲಿ ತುಳಿದು ಮುಂದೆ ಸಾಗುತ್ತವೆ. ಇದನ್ನು ಬಿಟ್ಟು ತನ್ನ ದಾರಿಯಲ್ಲಿ ಅಡ್ಡಲಾಗಿ ನಿಂತಿರುವ ಮನುಷ್ಯನ ಬಳಿ ದಾರಿ ಬಿಡು ಎಂದು ಆನೆ ಕೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
Nature is Amazing ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆನೆ ಹೋಗುತ್ತಿರುವ ದಾರಿಯಲ್ಲಿ ನಿಂತಿದ್ದ ವ್ಯಕ್ತಿಗೆ ಆನೆ ತಾನು ಮುಂದೆ ಹೋಗಲು ದಾರಿ ಬಿಡುವಂತೆ ಆ ವ್ಯಕ್ತಿಗೆ ಸೂಚಿಸಿದಂತಿದೆ. ಇನ್ನೂ ಆನೆಯನ್ನು ನೋಡಿದ ಕೂಡಲೇ ಶಾಕ್ ಆಗುವ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತು ಪಕ್ಕಕ್ಕೆ ಓಡಿ ಬರುತ್ತಾನೆ. ಬಳಿಕ ಆನೆ ಮುಂದಕ್ಕೆ ಹೋಗುತ್ತದೆ. ಆನೆ ಆ ವ್ಯಕ್ತಿ ಸ್ವಲ್ಪವೂ ತೊಂದರೆ ಕೊಡುವುದಿಲ್ಲ. ಇದೀಗ ವಿಡಿಯೋ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
PublicNext
18/12/2024 11:49 am