ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ಬೇಕು ಎಂದು ಯುವತಿಯೊಬ್ಬಳು ನಾಯಿ ಮೊಲೆ ಚೀಪಿ ಹಾಲು ಕುಡಿದ ವಿಡಿಯೋ ವೈರಲ್ ಆಗಿದ್ದು ವಿಡಿಯೋ ನೋಡಿದ ನೆಟ್ಟಿಗರು ಯುವತಿ ನಡೆಯನ್ನು ಖಂಡಿಸಿದ್ದಾರೆ.
ಬೇಕೆಂದು ತರಹೇವಾರಿ ಮಂಗನಾಟ ಆಡುವವರನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್ ಫೇಮಸ್ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಚೀಪಿ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ರೀಲ್ಸ್ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
PublicNext
17/12/2024 02:26 pm