ಮಂಗಳೂರು:ಜೂಜಾಟ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಹಾಗೂ ಠಾಣಾಧಿಕಾರಿ ಹರೀಶ್ ನೇತೃತ್ವದ ತಂಡ ಆಟದಲ್ಲಿ ನಿರತ ರಾಗಿದ್ದ 33 ಮಂದಿ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ನಗದು ಹಾಗೂ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನಿಶಾಂತ್ ರಾಜೇಶ್ (35), ಆನಂದ ಡಿಸೋಜ (46), ಚೇತನ್ (39), ನಿತಿನ್ (34), ಪುಷ್ಪರಾಜ್ ಬಳ್ಳಾಲ್ (52), ನೌಷಾದ್ (37), ನಾಗೇಶ್ (36), ಅಬ್ದುಲ್ ಮಜೀದ್(37), ಹರೀಶ್ (45), ಉಮೇಶ್ (52), ವಿನಾಯಕ (47) ಅಜಿತ್ ಕುಮಾರ್ (36), ರಾಘವೇಂದ್ರ (34), ಪ್ರವೀಣ್ ಕುಮಾರ್ (58), ಚೆನ್ನಕೇಶವ (42), ಭಾಸ್ಕರ (36), ವಿಶ್ಲೇಶ (42), ಸಂಕೇತ್ (35), ಪವನ್ ರಾಜ್ (37), ಲೋಹಿತ್ (42), ಸತೀಶ್ ಇ., ಧೀರಜ್ ಕುಮಾರ್ (26), 3 (30), 5 (37), ໖ (34), ಅನಿಲ್ ಕುಮಾರ್ (30), ನಿತೀಶ್ (21), ಸತೀಶ್ (36)ಮುಸ್ತಫ ಕೆ.ಪಿ. (33), ಅರುಣ್ ಡಿಸೋಜ (50), ರೋಹಿತಾಶ್ವ ಪೂಜಾರಿ ( 32), ವಿಜೇತ್ ಕುಮಾರ್ (39), ನಿಖಿಲ್ (34) ಎಂದು ಗುರುತಿಸಲಾಗಿದೆ
ಆರೋಪಿಗಳಿಂದ 7,81,420 ರೂ. ನಗದು, ಇಸ್ಪೀಟ್ ಎಲೆಗಳು, 3 ಸ್ಟೀಲ್ ಟೇಬಲ್, 10 ಪ್ಲಾಸ್ಟಿಕ್ ಚೆಯರ್‌ಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಎಂಬಲ್ಲಿನ ಮನೆಯೊಳಗೆ ಆಟ ಆಡಿಸುತ್ತಿದ್ದ ನಿಶಾಂತ್ ಪರಾರಿಯಾಗಿದ್ದಾನೆ.
ಆರೋಪಿಗಳ ವಿರುದ್ಧ ಎ.ಸಿ.ಜೆ. ಜೆಎಂಎಫ್‌ಸಿ ನ್ಯಾಯಾಲಯ, ಬಂಟ್ವಾಳರವರ ಆದೇಶದಂತೆ ಪ್ರಕರಣ ದಾಖಲಾಗಿದೆ.
Kshetra Samachara
19/12/2024 09:02 pm