ಮಂಗಳೂರು: ನಗರದ ಮಾರ್ನಮಿಕಟ್ಟೆಯ ಎಟಿಎಂನಿಂದ ಹಣ ಕಳವಿಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಡಿಸೆಂಬರ್ 16ರ ಸಂಜೆ 6:30ರಿಂದ 17ರ ಬೆಳಗ್ಗೆ 8 ಗಂಟೆಯ ಮಧ್ಯೆ ಮಾರ್ನಮಿಕಟ್ಟೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂನ ಮಾನಿಟರ್ ಸ್ಟೀನ್, ಕೀ ಪ್ಯಾಡ್, ಕಾರ್ಡ್ ರೀಡರ್ ಮೊದಲಾದವುಗಳಿಗೆ ಹಾನಿ ಮಾಡಿ ಹಣ ಕಳವಿಗೆ ಯತ್ನಿಸಿದ್ದಾರೆ. ಇದರಿಂದ 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ನ ಮ್ಯಾನೇಜರ್ ಅನುಮೋಹನ್ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
19/12/2024 04:34 pm