ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ - 6. ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು : ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಬೈಕಂಪಾಡಿಯಲ್ಲಿ ಅರಣ್ಯ ಸಂಚಾರಿ ದಳ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದಾರೆ. ವಿವಿಧ ಜಾತಿಯ 61 ದಿಮ್ಮಿಗಳ ಸಹಿತ 6 ಲಕ್ಷ ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಅಲ್ಲದೇ ಮುತ್ತಪ್ಪ ಹೊಸಮನಿ ಎಂಬಾತನ ವಿರುಧ್ಧ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ಎಂ. ಖಣದಾಳಿ ಅವರ ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ತನಿಖೆ ನಡೆಸುತ್ತಿದ್ದಾರೆ.

Edited By : PublicNext Desk
PublicNext

PublicNext

20/12/2024 03:18 pm

Cinque Terre

6.9 K

Cinque Terre

0

ಸಂಬಂಧಿತ ಸುದ್ದಿ