ಹೊಸದುರ್ಗ:ಬಸವಣ್ಣನವರ ಕುರಿತು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಡಿರುವ ಮಾತು ಅಕ್ಷಮ್ಯ' ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ .ಯತ್ನಾಳ ಅವರಿಗೆ ಬಸವ ಧರ್ಮದ ಪರಿಚಯವೇ ಇದ್ದಂತಿಲ್ಲ. ಬಸವಣ್ಣನವರು ಹೊಳೆಗೆ ಹಾರಿ ಸಾಯುವ ಹೇಡಿಯಾಗಿರಲಿಲ್ಲ.ಬಸವಣ್ಣನವರ ಇತಿಹಾಸ ಮತ್ತು ವಚನಗಳನ್ನು ಇನ್ನಾದರೂ ಓದುವ ಪ್ರಯತ್ನ ಮಾಡಲಿ. ಆ ಮೂಲಕ ಬಸವಣ್ಣ ಮತ್ತು ಲಿಂಗಾಯತ ಧರ್ಮದ ನೈಜ ಪರಿಚಯವಾಗಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು' ಎಂದು ಸ್ವಾಮೀಜಿ ಪ್ರಕಟಣೆ ಮೂಲಕ ಹೇಳಿದ್ದಾರೆ.
Kshetra Samachara
04/12/2024 08:51 pm