ನಗರಸಭೆ ಬೋರ್ಡ್ ಅವಳಡಿಸಿ ಮತ್ತೆ ಬೋರ್ಡ್ ಕಿತ್ತು ಹಾಕಿದ್ದಾರೆಂಬ ನಗರಸಭೆ ಸದಸ್ಯ ದೀಪಕ್ ಅವರ ಆರೋಪಕ್ಕೆ ಚಿತ್ರದುರ್ಗದಲ್ಲಿ ನಗರಸಭೆ ಪೌರಾಯುಕ್ತೆ ರೇಣುಕಾ ಪ್ರತಿಕ್ರಿಯೆ ನೀಡಿದ್ದಾರೆ. ಆದಿಶಕ್ತಿ ನಗರದಲ್ಲಿ ಎಂಟು ಕಡೆ ನಗರಸಭೆ ಜಾಗ ಎಂದು ಬೋರ್ಡ್ ಅಳವಡಿಕೆ ಮಾಡಿದ್ದು ಸತ್ಯ. ಆದರೆ ಅದರಲ್ಲಿ ಎರಡು ಕಡೆಗಳಲ್ಲಿ ನಗರಸಭೆ ವತಿಯಿಂದಲೇ ಸೇಲ್ ಸರ್ಟಿಫಿಕೇಟ್ ನೀಡಲಾಗಿದೆ. ಈ ಕಾರಣಕ್ಕಾಗಿ ಸೇಲ್ ಸರ್ಟಿಫಿಕೇಟ್ ನೀಡಿದ್ದು ಸಾಬೀತಾದ ಕಾರಣಕ್ಕೆ ಅಳವಡಿಕೆ ಮಾಡಿದ್ದ ಬೋರ್ಡ್ ಗಳನ್ನ ತೆರವು ಮಾಡಲಾಗಿದೆ ಎಂದರು. ಉಳಿದ ಆರು ಕಡೆ ಅಳವಡಿಕೆ ಮಾಡಿರುವ ಬೋರ್ಡ್ ಗಳನ್ನ ಯಾರೂ ಕೂಡಾ ಕಿತ್ತು ಹಾಕಿಲ್ಲ ಎಂದರು. ನಗರಸಭೆ ಆಸ್ತಿ ಉಳಿಸುವುದು ನಮ್ಮ ಕರ್ತವ್ಯ, ಇದನ್ನೇ ಆರೋಪ ಮಾಡಿದ್ರೆ ನಾವೇನೂ ಮಾಡಲು ಆಗಲ್ಲ ಎಂದರು.
Kshetra Samachara
04/12/2024 08:10 pm