ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ಬುದ್ದಿ ಕಲಿಸಲು ವಕೀಲರು, ಸಂವಿಧಾನ ಸೈನಿಕರಂತೆ ಕೆಲಸ ಮಾಡಬೇಕು ಅಂತಾ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಚಿತ್ರದುರ್ಗ ವಕೀಲರ ಸಂಘದಿಂದ ನಗರದ ತರಾಸು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆ ಹಾಗೂ 25-50 ವರ್ಷ ವಕೀಲಿ ವೃತ್ತಿ ಪೂರೈಸಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ದೇಶದೊಳಗಿನ ಯಾವುದೇ ಸಮಸ್ಯೆ ಗೆ ಮವಿಧಾನವೇ ಅತ್ಯತ್ತಮ ಪರಿಹಾರ. ಹಾಗಾಗಿ ವಕೀಲ ವೃತ್ತಿಯಲ್ಲಿರುವವರು ಸಂವಿಧಾನದ ಸೈನಿಕರಾಗಬೇಕು ಇಂದು ಸಂವಿಧಾನವನ್ನು ಅಪಹಾಸ್ಯ, ನಿರ್ಲಕ್ಷ, ಹಾಗು ದುರುಪಯೋಗ ಮಾಡುವವರನ್ನು ನೋಡುತ್ತಿದ್ದೇವೆ. ಅಂಥವರಿಗೆ ಸರಿಯಾದ ಬುದ್ಧಿ ಕಲಿಸುವುದು ಅಂದ್ರೆ ಸಂವಿಧಾನದ ಸಮರ್ಪಕ ಅನುಷ್ಠಾನ. ಹಾಗಾಗಿ ವಕೀಲರು ಯಾವಾಗಲೂ ಸಂವಿಧಾನದ ಸೈಕಿಕರಂತೆ ಹೋರಾಟ ಮಾಡಿದಾಗ ಮಾತ್ರ ದೇಶ ಬಹಳ ಎತ್ತರಕ್ಕೆ ಬೆಳೆಯುತ್ತೆ ಅಂದ್ರು.
Kshetra Samachara
04/12/2024 08:12 pm