ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : 'ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರಬೇಕು'

ಚಳ್ಳಕೆರೆ : ಪ್ರಸ್ತುತ ಇಂದಿನ ದಿನಮಾನಗಳಲ್ಲಿ ಡಿಜಿಟಲ್ ಸಾಧನಗಳು ಹಾಗೂ ಮೊಬೈಲ್ ಬಳಕೆಯು ಮಕ್ಕಳಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ ? ತಂತ್ರಜ್ಞಾನದ ವ್ಯಸನವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಜ್ಞಾನಿ ಡಾ.ರಾಜಶೇಖರ್ ಹೇಳಿದರು.

ನಗರದ ತ್ಯಾಗರಾಜ ನಗರದ ಮೈ ಚೋಟ ಶಾಲೆಯಲ್ಲಿ ಶಾಲಾ ವತಿಯಿಂದ ಹಮ್ಮಿಕೊಂಡಿದ್ದ ತಂತ್ರಜ್ಞಾನ ಮತ್ತು ಮಕ್ಕಳ ಮುಂದಿನ ಭವಿಷ್ಯ .ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಶಾಲಾ ಮಕ್ಕಳನ್ನು ಕುರಿತು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ಬಹುದೊಡ್ಡ ತಂತ್ರಜ್ಞಾನ ಕ್ರಾಂತಿಕಾರಿಯಾದರೆ ಎಐಡಿ ತಂತ್ರಜ್ಞಾನ ದಿಂದ ಹೊಸ ಆಯಾಮಗಳನ್ನು ತೆರೆದುಕೊಳ್ಳುತ್ತದೆ ಇದಕ್ಕೆ ಪೂರಕವಾಗಿ ನಮ್ಮ ಮಕ್ಕಳನ್ನ ಬೆಳೆಸಬೇಕಿದೆ. ತಂತ್ರಜ್ಞಾನದ ವ್ಯಸನವು ಯಂತ್ರಗಳೊಂದಿಗೆ ಮನುಷ್ಯರ ಅತಿಯಾದ ಪರಸ್ಪರ ಕ್ರಿಯೆಯಿಂದ ಉಂಟಾಗುವ ವರ್ತನೆಯ ಸಮಸ್ಯೆಯಾಗಿದೆ ಎಂದರು.

ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವೂ ಸಹ ಕಲಿಸಬೇಕು. ಸಂಸ್ಕಾರ ತಂದೆ ತಾಯಿಗಳಿಂದ ಪೋಷಕರಿಂದ ಕಲಿತು ನಂತರ ಶಾಲೆಯಲ್ಲಿ ಕಲಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರಕಲಾ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಶಿಕ್ಷಕರು ಇದ್ದರು...

Edited By : PublicNext Desk
Kshetra Samachara

Kshetra Samachara

04/12/2024 08:53 am

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ