ಚಳ್ಳಕೆರೆ : ವಿದ್ಯಾರ್ಥಿನಿಯರ ವ್ಯಾಸಂಗಕ್ಕೆಂದು ನಿರ್ಮಿಸಿದ ಸುಸಜ್ಜಿತ ನಿಲಯ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಹೌದು... ಚಳ್ಳಕೆರೆ ನಗರದ ಹೆಚ್ ಪಿಪಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಚಿವ ಡಿ.ಸುಧಾಕರ್ ಅವಧಿಯಲ್ಲಿ ಗ್ರಾಮೀಣ ಹಾಗೂ ವಿವಿಧ ದೂರದ ಪ್ರದೇಶಗಳಿಂದ ಕಾಲೇಜಿಗೆ ವ್ಯಾಸಂಗಕ್ಕೆ ಬರುವ ಪರಿಶಿಷ್ಟ ಪಂಗಡದ( ನಾಯಕ) ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಸಹಕಾರಿಯಾಗಲೆಂದು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಎಸ್ಟಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಿಸಲಾಗಿದೆ.
ಆದರೆ ದುರಾದೃಷ್ಟವೆನೆಂದರೆ ಈವರೆಗೂ ಇದರ ಉದ್ಘಾಟನೆಯಾಗಿಲ್ಲ, ಇದರಿಂದ ಈ ಕಟ್ಟಡವನ್ನು ಪುಂಡು ಪೋಕರಿಗಳು ಅನೈತಿಕ ತಾಣವಾಗಿ ಮಾಡಿದ್ದಾರೆ. ಕುಡುಕರ ಅಡ್ಡೆಯಾಗಿದ್ದು, ಕಿಡಿಗೇಡಿಗಳು ಕಟ್ಟಡದ ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿ ಹಾಳು ಮಾಡುತ್ತಿದ್ದಾರೆ.
ಸುಸಜ್ಜಿತ ಕಟ್ಟಡ ಬಳಕೆ ಮಾಡದೆ ಇರುವುದರಿಂದ ಗಿಡಗೆಂಟೆಗಳ ಬೆಳದು ಉದ್ಘಾಟನೆಗೂ ಮುನ್ನ ಪಾಳು ಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಬಹಳ ಬೇಡಿಕೆ ಇದ್ದು ವಸತಿ ನಿಲಯದಲ್ಲಿ ಪ್ರವೇಶ ಲಭ್ಯವಾಗದ ವಿದ್ಯಾರ್ಥಿಗಳು ಸಚಿವರ ಶಿಪಾರಸ್ಸು ಪತ್ರಕ್ಕಾಗಿ ಅಲೆದಾಡುವ ದೃಶ್ಯಗಳನ್ನು ಕಾಣಬಹುದು. ಎಸ್ಟಿ ಸಮುದಾದ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ವಿದ್ಯಾರ್ಥಿನಿಲಯಕ್ಕೆ ದಾಖಲಾತಿ ನೀಡದೆ ಮುಚ್ಚಲಾಗಿದೆ.
ಕೂಡಲೇ ಸಂಬಂಧಪಟ್ಟವರು ಇತ್ತಗಮನ ಹರಿಸಿ, ಇದಕ್ಕೆ ಸೂಕ್ತ ಕ್ರಮಕೈಗೊಂಡು ಕೂಡಲೇ ವಸತಿ ನಿಲಯ ಉದ್ಘಾಟನೆಗೆ ಮುಂದಾಗಬೇಕಿದೆ.
PublicNext
04/12/2024 11:06 am