ನೆಲಮಂಗಲ: ಮೊಬೈಲ್‌ನಲ್ಲಿ ಗೇಮ್ ಆಡೋದು ಬಿಟ್ಟು ಪರೀಕ್ಷೆಗೆ ಓದಿಕೋ ಎಂದು ತಾಯಿ ಬುದ್ದಿ ಹೇಳಿದ ಒಂದೇ ಮಾತಿಗೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಶಿನಕುಂಟೆಯಲ್ಲಿ ನೆಡೆದಿದೆ.
ಅರಿಶಿನಕುಂಟೆ ಆರ್ದಶನಗರ ನಿವಾಸಿ ಪುಷ್ಪ ಎಂಬುವರ ಒಬ್ಬನೇ ಮಗ, ಶಶಾಂಕ್ 19 ವರ್ಷ ನೇಣು ಬಿಗಿದುಕೊಂಡ ಯುವಕ.
ಈತ ನೆಲಮಂಗಲ ನಗರದ ಗಣೇಶನಗುಡಿ ಸಮೀಪದ ಶ್ರೀಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡ್ತಿದ್ದ, ಪರೀಕ್ಷೆಯ ಕಾರಣ ಕಾಲೇಜಿಗೆ ರಜೆ ನೀಡಲಾಗಿತ್ತು. ಪರೀಕ್ಷೆಗೆ ಓದಿಕೊಳ್ಳದೇ ಮನೆಯಲ್ಲಿ ಯಾವಾಗಲೂ ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಕಾಲಹರಣ ಮಾಡ್ತಿದ್ದ.
ಪರೀಕ್ಷೆಗೆ ಓದುವ ವಿಚಾರಕ್ಕೆ ಬೈದಿದ್ದಕ್ಕೆ ಕೋಪದಲ್ಲಿ ಹೋದ ಶಶಾಂಕ್ ರೂಮ್ ಬಾಗಿಲು ಹಾಕ್ಕೊಂಡು ಹಗ್ಗದಿಂದ ಫ್ಯಾನಿಗೆ ನೇಣು ಬಿಗಿದ್ಕೊಂಡು ಒದ್ದಾಡುತ್ತಿದ್ದ, ತಕ್ಷಣವೇ ಗಮನಿಸಿದ ತಾಯಿ ಗಾಬರಿಯಿಂದ ಕೂಡಲೇ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರೋದಾಗಿ ತಿಳಿಸಿದ್ದಾರೆ.
ನನ್ನ ಮಗ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ತಾಯಿ ಪುಷ್ಪ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/12/2024 01:58 pm