ಚಳ್ಳಕೆರೆ : ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಸ್ಪೀಟ್ ಆಡುತ್ತಿದ್ದಂತವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ 10 ಮಂದಿ ಬಂದಿಸಿ, ಅವರಿಂದ ನಗದು ಜಪ್ತಿ ಮಾಡಿ, ಎಫ್‌ಐಆರ್ ದಾಖಲಿಸಿದ್ದಾರೆ.
ತಾಲ್ಲೂಕಿನ ಆಲೂರು ಗ್ರಾಮದ ಬಳಿಯಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿರುವಂತ ಖಚಿತ ಮಾಹಿತಿ ಮೇರೆಗೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕಾಳಿ ಕೃಷ್ಣ ಅವರಿಗೆ ಕ್ರಮಕ್ಕೆ ಸೂಚಿನೆ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಹೇಶ್ ಗೌಡ ನೇತೃತ್ವದಲ್ಲಿ ಸಿಬ್ಬಂದಿಗಳ ಜೊತೆಗೂಡಿ ದಾಳಿಮಾಡಿ ಜೂಜುಕೊರರನ್ನ ಬಂಧಿಸಿದ್ದಾರೆ.
Kshetra Samachara
04/12/2024 07:30 am