ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪೊಲೀಸರ ರೋಚಕ ಕಾರ್ಯಾಚರಣೆ - ಜನರ ನಿದ್ದೆಗೆಡಿಸಿದ್ದ ಬೈಕ್ ಕಳ್ಳರು ಅರೆಸ್ಟ್!

ಬೆಳಗಾವಿ: ಬೆಳಗಾವಿಯ ಟಿಳಕವಾಡಿ ಪೊಲೀಸರು ರೋಚಕ ಕಾರ್ಯಚರಣೆ ನಡೆಸಿದ್ದು, ಆರೋಪಿಗಳು ಹಾಕಿಕೊಳ್ಳುತ್ತಿದ್ದ ಚಪ್ಪಲಿ ಆಧರಿಸಿ ಕಳ್ಳರನ್ನು ಬಂಧಿಸಿದ್ದಾರೆ.

ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ಮತ್ತು ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಟಿಳಕವಾಡಿ ಸಿಪಿಐ ಪರುಶರಾಮ ಪೂಜೇರಿ, ಪಿಐ ಸಂತೋಷ ದಳವಾಯಿ ನೇತೃತ್ವದ ತಂಡದಿಂದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ವೀರಭದ್ರ ನಗರದ ಹೈದರ್‌ಅಲಿ ಶೇಖ್, ಅಮನ್ ನಗರದ ನದೀಮ್ ಟೋಪಿಗಾರ ಬಂಧಿತರು. ಆರೋಪಿಗಳ ಬೈಕ್ ಕಳ್ಳತನ ಮಾಡುವ ವೇಳೆ ಒಂದೇ ರೀತಿಯ ಚಪ್ಪಲಿ ಧರಿಸುತ್ತಿರುವುದು ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಂಧಿತ ಇಬ್ಬರೂ ಆರೋಪಿಗಳಿಂದ 7 ಲಕ್ಷ ಮೌಲ್ಯದ 10 ಬೈಕ್ ಜಪ್ತಿ ಮಾಡಲಾಗಿದೆ.‌

ತಿಲಕವಾಡಿ ಸಿಪಿಐ ಪರಶುರಾಮ್ ಪೂಜೇರಿ, ಪಿಎಸ್ ಐ ಸಂತೋಷ ದಳವಾಯಿ ಸಿಬ್ಬಂದಿಗಳು ನೇತೃತ್ವದಲ್ಲಿ ತನಿಖಾ ತಂಡ ಯಶಸ್ವಿ ಕಾರ್ಯಾಚರಣೆ ಮಾಡಿದಕ್ಕೆ ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಶ್ಲಾಘಿಸಿದ್ದಾರೆ.

Edited By : Vinayak Patil
PublicNext

PublicNext

03/12/2024 03:48 pm

Cinque Terre

13.46 K

Cinque Terre

0

ಸಂಬಂಧಿತ ಸುದ್ದಿ