ಹೊಳಲ್ಕೆರೆ : ಪಟ್ಟಣದ ಗಣಪತಿ ದೇವಾಲಯದ ಚೀರನಹಳ್ಳಿಗೆ ಹೋಗುವ ರಸ್ತೆಯ ಹೀರೆಕೆರೆಯ ಪಕ್ಕದಲ್ಲಿ 5 ಎಕರೆ 20 ಗುಂಟೆ ವೀರಶೈವ ರುದ್ರಭೂಮಿ ಇದ್ದು, ಈ ಸಮಾಜದ ಧೈವಾಧೀನರಾದರನ್ನು ಈ ರುದ್ರಭೂಮಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತೆ.
ಇಂತಹ ರುದ್ರಭೂಮಿಯಲ್ಲಿ ಮರಳು ದಂಧೆಕೋರರು ಕಾಲಿಟ್ಟಿದ್ದು, ಜೆಸಿಬಿ ಮೂಲಕ ಶವ ಸಂಸ್ಕಾರ ಮಾಡಿದ ಹೆಣಗಳನ್ನು ಹೊರ ತೆಗೆದು ಮರಳು ತುಂಬುತ್ತಿದ್ದಾರೆ. ತಡರಾತ್ರಿ ವೇಳೆ ಜೆಸಿಬಿ ಇಂದು ಮಣ್ಣು ಅಗೆದು ಟ್ರ್ಯಾಕ್ಟರ್ ಮೂಲಕ ಮರಳು ತುಂಬಿ ಸಾಗಾಟ ಮಾಡುತ್ತಿದ್ದಾರೆ.
ಇದು ಹೀಗೆ ಮುಂದೆವರೆದರೆ ಹೆಣ ಹೂಣಲು ಜಾಗ ಇರುವುದಿಲ್ಲ ಎಂದು ಪಟ್ಟಣ ಶಾಖೆಯ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೂಡಲೇ ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿ ಇದಕ್ಕೆಲ್ಲಾ ಕಡಿವಾಣ ಹಾಕಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
PublicNext
03/12/2024 09:15 am