ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಗ್ರಾಮ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿದ್ದು ಬಸ್ ಸೌಲಭ್ಯ ಇರದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ಈ ಗ್ರಾಮದಲ್ಲಿ ಶಾಲೆ ಕೂಡ ಇರದ ಕಾರಣ 3 ಕಿಲೋಮೀಟರ್ ದೂರದ ದೊಡ್ಡಸಿದ್ದವ್ವನಹಳ್ಳಿ ಗ್ರಾಮಕ್ಕೆ ಸಂಚರಿಸಬೇಕಿದ್ದು ಬಸ್ ಸೌಲಭ್ಯ ಇರದೆ ಶಾಲಾ ಮಕ್ಕಳು ಬಿಸಿಲಿನಲ್ಲೆ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಮಾತನಾಡಿದ್ದು ಕ್ಯಾದಿಗೆರೆ ಗ್ರಾಮದಿಂದ ದೊಡ್ಡ ಸಿದ್ಧವನಹಳ್ಳಿ ಶಾಲೆಗೆ ಬರಲು ಸುಮಾರು 3 ಕಿ.ಮೀ ದೂರವಿದೆ ಯಾವುದೇ ರೀತಿಯ ಆಟೋ ಅಥವಾ ಬಸ್ ಗಳ ವ್ಯವಸ್ಥೆ ಇರುವುದಿಲ್ಲ ಪ್ರತಿದಿನ ನಡೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಮಳೆ ಬಂದರೆ ನಿಲ್ಲುವುದಕ್ಕೂ ಕೂಡ ಯಾವುದೇ ವ್ಯವಸ್ಥೆ ಇಲ್ಲ ಬ್ಯಾಗ್ ಗಳು ಒದ್ದೆಯಾಗುತ್ತವೆ ಹಾಗೂ ನಾವುಗಳು ಕೂಡ ಮಳೆಯಲ್ಲೆ ನೆನೆದುಕೊಂಡು ಬರುವ ಪರಿಸ್ಥಿತಿಯಾಗಿದೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಕ್ಕಳು ಆಗ್ರಹ ಮಾಡಿದ್ದಾರೆ.
ಈ ಬಗ್ಗೆ ಪೋಷಕರಿಗೂ ಕೂಡ ಆತಂಕದಲ್ಲಿದ್ದು ಹೆಣ್ಣು ಮಕ್ಕಳನ್ನ ಇದೇ ಶಾಲೆಗೆ ಕಳುಹಿಸುತ್ತಿದ್ದು ರಕ್ಷಣೆ ಇರದೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಇಲಾಖೆ ಗಮನಕ್ಕೂ ತಂದಿದ್ದು ಕೆ.ಎಸ್.ಆರ್.ಟಿ.ಸಿ ನಿಗಮದವರಿಗೆ ಪೋಷಕರು ಮನವಿಯನ್ನು ನೀಡಿದ್ದರು ಸಹ ನಮ್ಮಲ್ಲಿ ಸ್ಟಾಫ್ ಕೊರತೆ ಮತ್ತು ಬಸ್ ಗಳು ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ.
ಸ್ಥಳೀಯ ಶಾಸಕರ ಗಮನಕ್ಕೂ ತಂದಿದ್ದರು ಯಾವುದೇ ರೀತಿ ಕಾರ್ಯೋನ್ಮುಖರಾಗದೆ ಇರದೆ ಇರುವುದರಿಂದ ಆದಷ್ಟು ಬೇಗ ಬಸ್ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
PublicNext
03/12/2024 03:50 pm