ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಚಿತ್ರದುರ್ಗ : ಅಬಕಾರಿ ಇಲಾಖೆಯ ಡಿಸಿ ಸ್ಪೆಶಲ್‌ ಸ್ಕ್ವಾಡ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದವನನ್ನು ಬಂಧಿಸಿದ್ದಾರೆ. ಬಂಧಿತನಿಂದ‌ 972 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಯಾದಘಟ್ಟ ನಿವಾಸಿ ಲೋಕೇಶ್ (25) ಬಂಧಿತ ಆರೋಪಿ. ತಾಲೂಕಿನ ಬೆಲಗೂರು ಗ್ರಾಮದ ಹೊರವಲಯದಲ್ಲಿ‌ ಬೈಕ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಲೋಕೇಶ್ ಗಾಂಜಾ ಸಾಗಾಟ ಮಾಡುತ್ತಿದ್ದ.

ಈ ವೇಳೆ ನಿಖರ ಮಾಹಿತಿ ಮೇರೆಗೆ ಸ್ಪೇಶಲ್ ಸ್ಕ್ವಾಡ್ ಅಧಿಕಾರಿಗಳು ಡಿಸಿ ಡಾ. ಬಿ.ಮಾದೇಶ್, ಮಾರ್ಗದರ್ಶನದಲ್ಲಿ, ಅಬಕಾರಿ ನಿರೀಕ್ಷಕರಾದ ವನಿತಾ, ಸಿಬ್ಬಂದಿಗಳಾದ ಕೆ.‌ರಮೇಶ್ ನಾಯ್ಕ, ಜೆ.‌ಬಸವರಾಜ್, ನಾಗರಾಜ ತೋಳಮಟ್ಟಿ, ಹಾಗೂ ರಂಗಸ್ವಾಮಿ ದಾಳಿ ನಡೆಸಿದ್ದಾರೆ. ಇನ್ನು ಲೋಕೇಶ್ ವಿರುದ್ಧ MDPS ಕಾಯ್ದೆಯ ಸೆಕ್ಷನ್ (8) c ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Edited By : Ashok M
PublicNext

PublicNext

01/12/2024 07:34 am

Cinque Terre

33.17 K

Cinque Terre

0

ಸಂಬಂಧಿತ ಸುದ್ದಿ