ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: “ಊರಿಗೆ ಬಂದ್ರೆ ನಿನ್ನ ಪ್ರಾಣ ತೆಗೀತೀವಿ” – ಆಡಿಯೋದಲ್ಲಿ ಕೊಲೆ ರಹಸ್ಯ ರಿವೀಲ್, ಮಂಜುನಾಥ್ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕೊಣನೂರು ಗ್ರಾಮದಲ್ಲಿ ಎರಡು ದಿನದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯನ್ನ ಹುಡುಗಿಯ ಪೋಷಕರು ಸೈಜುಗಲ್ಲು, ದೊಣ್ಣೆ ಕೋಲು, ರಾಡುಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದರು. ಈ ಹತ್ಯೆ ಪ್ರಕರಣಕ್ಕೆ ಇನ್ನೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮೃತ ಮಂಜುನಾಥನ ಮೊಬೈಲ್ ಫೋನ್ನಲ್ಲಿ ಆಡಿಯೋ ಒಂದು ರೆಕಾರ್ಡ್ ಆಗಿದ್ದು ಎಲ್ಲರಿಗೂ ಅಚ್ಚರಿಯುಂಟು ಮಾಡಿದೆ. ಕೊಲೆ ಆಗುವುದಕ್ಕಿಂತ ಮುಂಚೆ ಮಂಜುನಾಥ್ ಪ್ರೀತಿಸುತ್ತಿದ್ದ ರಕ್ಷಿತಾ ಎಂಬುವರ ಕುಟುಂಬದವರಿಂದ ಮಂಜುನಾಥ್ ಗೆ ಬೆದರಿಕೆ ಕರೆಯನ್ನು ಹಾಕಿದ್ದಾರೆ. ನೀನು ಊರಿಗೆ ಬಂದರೆ ಎರಡು ಕಾಲುಗಳನ್ನು ಕಟ್ ಮಾಡುವುದಾಗಿ ಮುಂಚಿತವಾಗಿ ತಿಳಿಸಿದ್ದಾರೆ. ನೀನು ಊರಿಗೆ ಬಂದರೆ ನಿನ್ನ ಪ್ರಾಣವನ್ನ ತೆಗೆಯುತ್ತೇನೆ ಎಂದು ಹುಡುಗಿಯ ಪೋಷಕರು ಮಂಜುನಾಥ್ ಗೆ ಬೆದರಿಕೆ ಹಾಕಿದ್ದಾರೆ. ಇದರಂತೆಯೇ ಮಂಜುನಾಥ್ ಊರಿಗೆ ಹೋದಾಗ ಅವನ ಎರಡು ಕಾಲುಗಳಿಗೆ ಹೊಡೆದು ಅವನನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ.

ಸದ್ಯ ಈ ಆಡಿಯೋ ರೆಕಾರ್ಡ್ ಈಗ ಸಾಕಷ್ಟು ವೈರಲ್ ಆಗುತ್ತಿದ್ದು ಹುಡುಗಿಯ ಪೋಷಕರೇ ಪ್ಲ್ಯಾನ್ ಮಾಡಿ ಮಂಜುನಾಥ ನನ್ನ ಕೊಂದಿದ್ದಾರೆ ಎನ್ನುವುದಕ್ಕೆ ಈ ಆಡಿಯೋ ಉದಾಹರಣೆಯಾಗಿದೆ.

Edited By : Somashekar
PublicNext

PublicNext

29/11/2024 01:41 pm

Cinque Terre

38.98 K

Cinque Terre

0

ಸಂಬಂಧಿತ ಸುದ್ದಿ