ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕ್ಫ್‌ ಮಂಡಳಿ ನಿಷೇಧಿಸಿ : ಸರ್ಕಾರಕ್ಕೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹ

ಚಿಕ್ಕೋಡಿ : ವಕ್ಫ್‌ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರೈತರಿಗೆ ನೋಟಿಸ್‌ ನೀಡಿದೆ. ಈ ಮಂಡಳಿಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 70 ವರ್ಷಗಳಿಂದ ವಕ್ಫ್‌ ಬೋರ್ಡ್‌ಗೆ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಪಕ್ಷವೇ ಕಾರಣವಾಗಿದೆ. ನೋಟಿಸ್‌ ವಿರೋಧಿಸಿ ದಲಿತರು, ರೈತರು ನಡೆಸುತ್ತಿದ್ದಾರೆ ಎಂದು ಹೇಳಿದರು. ವಕ್ಫ್‌ ಕುರಿತು ಸಂಸತ್ತಿನ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ವಕ್ಸ್ ಮಂಡಳಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

1954 ರಲ್ಲಿ ಪ್ರಧಾನಿಯಾಗಿದ್ದ ನೆಹರು ಅವರು ಜಾರಿಗೆ ತಂದಿದಂತಹ ವಕ್ಫ್‌ ಮಂಡಳಿಗೆ 19 74ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಗಜೆಟ್ಟನ್ನು ಹೋರಡಿಸಿದರು.ಸದ್ಯ ರೈತರ ಜಮೀನು, ಮಠ ,ಮಾನ್ಯಗಳ ಆಸ್ತಿಗಳ ಮೇಲೆ ವಕ್ಫ್‌ ಎಂದು ನಮೂದಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಹುನ್ನಾರೇ ಕಾರಣ. ಪಹಣಿಗಳ ಮೇಲೆ ವಕ್ಫ್‌ ತೆಗೆಯುವ ಬದಲಾಗಿ, ವಕ್ಪ್ ಬೋರ್ಡ್ ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಸರ್ಕಾರವು ಹಗರಣಗಳ ಸರ್ಕಾರವಾಗಿದೆ. ದಿನಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿದೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬೇಸತ್ತು ಹೋಗಿದ್ದಾರೆ ಎಂದರು. ಬಿಜೆಪಿ ಪಕ್ಷವು ದಲಿತವಿರೋಧಿ ಪಕ್ಷವಲ್ಲ , ರಾಜ್ಯ ಸರ್ಕಾರವು ಬಹಳ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದರು.

ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದವರು ನಮಗೆ ಸೋಲಾಗಿದೆ. ಸೋಲನ್ನು ಒಪ್ಪಿಕೊಳ್ಳುತ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಸಂಘಟಿತವಾಗಿ ಹೋರಾಟವನು ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕ ದುರ್ಯೋಧನ ಐಹೊಳೆ,ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಸಂಜಯ ಪಾಟೀಲ, ದುಂಡಪ್ಪ ಭೆಂಡವಾಡೆ,ಶಾಂಭವಿ ಅಶ್ವತಪೂರ,ಅಮೃತ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Suman K
PublicNext

PublicNext

25/11/2024 12:53 pm

Cinque Terre

13.7 K

Cinque Terre

0

ಸಂಬಂಧಿತ ಸುದ್ದಿ